ಕರ್ನಾಟಕ ರಾಜ್ಯ ಸರ್ಕಾರವು ಹೊಸ ಪಡಿತರ ಚೀಟಿ ಅರ್ಜಿ (Karnataka New Ration Card Application 2026) : ಕರ್ನಾಟಕ u ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರಾಜ್ಯದ ಜನತೆಗೆ ಸಿಹಿಸುದ್ದಿ ನೀಡಿದ್ದು ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಪ್ರಕ್ರಿಯೆಯನ್ನು ಹಂತ ಹಂತವಾಗಿ ಪುನರಂಬಿಸುತ್ತಿದೆ ,ನೀವು ಈವರೆಗೆ ರೇಷನ್ ಕಾರ್ಡ್ ಹೊಂದಿಲದಿದ್ದರೆ ಅಥವಾ ಹೊಸದಾಗಿ ವಿವಾಹವಾಗಿ ಬೇರೆಯಾಗಿದ್ದರೆ ಹೊಸ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಇದು ಸರಿಯಾದ ಸಮಯ
1 ಕರ್ನಾಟಕ ಪಡಿತರ ಚೀಟಿಯ ವಿಧಗಳು (Types of Ration Card in Karnataka)
ಅರ್ಜಿ ಸಲ್ಲಿಸುವ ಮೊದಲು , ಸರ್ಕಾರವು ಯಾವ ರೀತಿಯ ಕಾರ್ಡ್ಗಳನ್ನು ನೀಡುತ್ತದೆ ಎಂಬುದನ್ನು ತಿಳಿಯಿರಿ
- PHH(proirty house hold) ಇದನ್ನು BPL ಕಾರ್ಡ್ ಎಂದು ಕರೆಯಲಾಗುತ್ತದೆ ಇದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮೀಸಲಾಗಿದೆ
- AAY(Antyodaya anna Yojana) ಅತೀ ಬಡ ಕುಟುಂಬಗಳಿಗೆ ನೀಡುವ ಕಾರ್ಡ್
- APL (Above poverty line) ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗೆ ಇದು ಸಿಗುತ್ತದೆ ಇದಕ್ಕೆ ಸಬ್ಸಿಡಿ ಇರುವುದಿಲ್ಲ ಅಥವಾ ಕಡಿಮೆ ಇರುತ್ತವೆ
- AY(Annapurna Yojana) 65 ವರ್ಷ ಮೇಲ್ಪಟ್ಟ ನಿರ್ಗತಿಕ ಹಿರಿಯ ನಾಗರಿಕರಿಗೆ ನೀಡುವ ವಿಶೇಷ ಕಾರ್ಡ್
2 ಹೊಸ ಪಡಿತರ ಚೀಟಿಗೆ ಅರ್ಹತೆಗಳು ( eligibility criteria)
ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
- ಕುಟುಂಬದ ಯಾವುದೇ ಸದಸ್ಯರು ಈಗಾಗಲೇ ಮತ್ತೊಂದು ರೇಷನ್ ಕಾರ್ಡ್ ನಲ್ಲಿ ಹೆಸರನ್ನ ಹೊಂದಿರಬಾರದು
- BPL ಕಾರ್ಡ್ ಗಾಗಿ: ವಾರ್ಷಿಕ ಆದಾಯ ₹1.20.ಲಕ್ಷಕ್ಕಿಂತ ಕಡಿಮೆ ಇರಬೇಕು. ಐಷಾರಾಮಿ ಕಾರು(ಸ್ವಂತ ಬಳಕೆಯದ್ದು) ಅಥವಾ ನಿಗದಿತ ಮಿತಿಗಿಂತ ಹೆಚ್ಚಿನ ಭೂಮಿ ಇರಬಾರದು
- ಸರ್ಕಾರಿ ನೌಕರರು ಅಥವಾ ಆದಾಯ ತೆರಿಗೆ ಪಾವತಿದಾರರು BPL ಕಾರ್ಡಿಗೆ ಅರ್ಹರಲ್ಲ (ಅವರು APL ಕಾರ್ಡ್ ಪಡೆಯಬಹುದು)
3 ಅಗತ್ಯವಿರುವ ದಾಖಲೆಗಳು ( Documents Required)
ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ
- ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ (Aadhaar card)
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ (ಆಧಾರ್ ಲಿಂಕ್ ಆಗಿರಬೇಕು)
- ವಾಸಸ್ಥಳದ ಪುರಾವೆ (ವಿದ್ಯುತ್ ಬಿಲ್ ಅಥವಾ ಬಾಡಿಗೆ ಒಪ್ಪಂದ)
- ಇತ್ತೀಚಿನ ಆದಾಯ ಮತ್ತು ಜಾತಿ ಪ್ರಮಾಣ ಪತ್ರ (income and caste certificate)
- ಕುಟುಂಬದ ಸದಸ್ಯರ ಭಾವಚಿತ್ರಗಳು (passport size photos)
4 ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಹಂತಗಳು

ಕರ್ನಾಟಕ ಸರ್ಕಾರದ ಅಧಿಕೃತ ಆಹಾರ ಪೋರ್ಟಲ್ (Ahara Portal) ಮೂಲಕ ನೀವು ಸುಲಭವಾಗಿ ಅರ್ಜಿ ಸಲ್ಲಿಸಬಹುದು
ಮೊದಲು ahara.kar.nic.in ವೆಬ್ ಸೈಟ್ ಗೆ ಲಾಗಿನ್ ಆಗಿ ನಂತರ ಮುಖಪುಟದಲ್ಲಿರುವ e services ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಹೊಸ ಪಡಿತರ ಚೀಟಿ (new Ration Card) ಆಯ್ಕೆಯನ್ನು ಆರಿಸಿಕೊಳ್ಳಿ
ನಿಮ್ಮ ಅನುಕೂಲಕ್ಕೆ ತಕ್ಕಂತೆ ಕನ್ನಡ ಅಥವಾ ಇಂಗ್ಲಿಷ್ ಭಾಷೆಯನ್ನ ಆಯ್ಕೆ ಮಾಡಿ ನಂತರ ನೀವು APL ಅಥವಾ BPL ಕಾರ್ಡ್ ಯಾವುದು ಬೇಕು ಎಂಬುದನ್ನು ಸೆಲೆಕ್ಟ್ ಮಾಡಿ
ಕುಟುಂಬದ ಪ್ರತಿಯೊಬ್ಬ ಸದಸ್ಯರ ಆಧಾರ್ ಸಂಖೆಯನ್ನು ನಮೂದಿಸಬೇಕು ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಗೆ OTP ಬರುತ್ತದೆ ನಮೂದಿಸಿ ದೃಢೀಕರಿಸಿ,ಕುಟುಂಬದ ಮುಖ್ಯಸ್ಥರ ವಿವರಗಳು ,ವಿಳಾಸ ವಾರ್ಷಿಕ ಆದಾಯ ಮತ್ತು ವೃತ್ತಿಯ ಬಗ್ಗೆ ನಿಖರವಾದ ಮಾಹಿತಿ ನೀಡಿ
ಕೆಲವೊಮ್ಮೆ ಸಮೀಪದ ‘ ಗ್ರಾಮ್ ಒನ್ ಅಥವಾ ಬೆಂಗಳೂರು ಒನ್ ‘ ಕೇಂದ್ರಗಳಿಗೆ ಹೋಗಿ ಬೆರಳಚ್ಚು ನೀಡಬೇಕಾಗಬಹುದು, ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ Submit ಬಟನ್ ಒತ್ತಿರಿ ನಿಮಗೆ ಒಂದು ಅರ್ಜಿ ಸಂಖ್ಯೆ ಸಿಗುತ್ತದೆ ಇದನ್ನು ಭವಿಷ್ಯದ ಉಲ್ಲೇಖಕ್ಕಾಗಿ ಉಳಿಸಿಕೊಳ್ಳಿ
5 ಪಡಿತರ ಚೀಟಿಯ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?
ಅರ್ಜುನ್ ಸಲ್ಲಿಸಿದ ನಂತರ ಅದು ಯಾವ ಹಂತದಲ್ಲಿದೆ ಎಂದು ತಿಳಿಯಲು ಈ ಕೆಳಗಿನ ಕ್ರಮ ಅನುಸರಿಸಿ
1 ಆಹಾರ ಇಲಾಖೆ ವೆಬ್ ಸೈಟ್ ಗೆ ಹೋಗಿ
2 e-status ವಿಭಾಗದ ಮೇಲೆ ಕ್ಲಿಕ್ ಮಾಡಿ
3 status of new / existing ration card ಆಯ್ಕೆ ಮಾಡಿ
4 ನಿಮ್ಮ ಜಿಲ್ಲೆಯನ್ನು ಆರಿಸಿ ಮತ್ತು ಅರ್ಜಿ ಸಂಖ್ಯೆಯನ್ನು ನಮೂದಿಸಿ
5 ಈಗ ನಿಮ್ಮ ಅರ್ಜಿಯ ಪ್ರಗತಿಯು ಪರದೆಯ ಮೇಲೆ ಕಾಣುತ್ತದೆ
6. ರೇಷನ್ ಕಾರ್ಡ್ ಪಡೆಯುವ ಪ್ರಯೋಜನಗಳು (Benefits of Ration Card)
6 ರೇಷನ್ ಕಾರ್ಡ್ ಕೇವಲ ಅಕ್ಕಿ ಪಡೆಯಲು ಮಾತ್ರವಲ್ಲದೆ, ಇತರೆ ಹಲವು ಉದ್ದೇಶಗಳಿಗೆ ಬಳಕೆಯಾಗುತ್ತದೆ:
ಅನ್ನಭಾಗ್ಯ ಯೋಜನೆ: ಸರ್ಕಾರದ ಉಚಿತ ಅಕ್ಕಿ ಮತ್ತು ಹಣದ ಸೌಲಭ್ಯ ಪಡೆಯಲು.
ಗೃಹ ಲಕ್ಷ್ಮಿ ಯೋಜನೆ: ಮಹಿಳೆಯರಿಗೆ ಮಾಸಿಕ 22,000 ಪಡೆಯಲು ಬಿಪಿಎಲ್ ಕಾರ್ಡ್ ಅತ್ಯಗತ್ಯ.
ಆರೋಗ್ಯ ಸೌಲಭ್ಯ: ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ಪಡೆಯಲು.
ಗುರುತಿನ ಚೀಟಿ: ವಿಳಾಸ ಮತ್ತು ಗುರುತಿನ ಅಧಿಕೃತ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.
ಶೈಕ್ಷಣಿಕ ಉದ್ದೇಶ: ಮಕ್ಕಳಿಗೆ ಸ್ಕಾಲರ್‌ಶಿಪ್ ಅಥವಾ ಶಾಲಾ ದಾಖಲಾತಿಗೆಅಗತ್ಯ.
| ಅರ್ಜಿ ಸಲ್ಲಿಸಲು ಲಿಂಕ್ ಕ್ಲಿಕ್ ಮಾಡಿ |
7. ಗಮನಿಸಬೇಕಾದ ಪ್ರಮುಖ ಅಂಶಗಳು (Important Tips)
ಮಧ್ಯವರ್ತಿಗಳ ಮೊರೆ ಹೋಗಬೇಡಿ: ರೇಷನ್ ಕಾರ್ಡ್ ಅರ್ಜಿ ಉಚಿತವಾಗಿರುತ್ತದೆ (ಅಲ್ಪ ಸೇವಾ ಶುಲ್ಕ ಹೊರತುಪಡಿಸಿ). ಯಾರಾದರೂ ಹಣ ಕೇಳಿದರೆ ದೂರು ನೀಡಿ.
ತಪ್ಪು ಮಾಹಿತಿ ನೀಡಬೇಡಿ: ಅನರ್ಹರು ಬಿಪಿಎಲ್ ಕಾರ್ಡ್ ಪಡೆದರೆ ಸರ್ಕಾರವು ಕಾನೂನು ಕ್ರಮ ಜರುಗಿಸಿ ದಂಡ ವಿಧಿಸುತ್ತದೆ.
ಇ-ಕೆವೈಸಿ (e-KYC): ನಿಮ್ಮ ಕಾರ್ಡ್ ಸಕ್ರಿಯವಾಗಿರಲು ಕುಟುಂಬದ ಸದಸ್ಯರೆಲ್ಲರೂ ಇ-ಕೆವೈಸಿ ಮಾಡಿಸುವುದು ಕಡ್ಡಾಯ.
8. ಸಾಮಾನ್ಯ ಪ್ರಶ್ನೆಗಳು (FAQs)
ಪ್ರಶ್ನೆ 1: ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ ಶುರುವಾಗುತ್ತದೆ? ಉತ್ತರ: ಸರ್ಕಾರವು ಕಾಲಕಾಲಕ್ಕೆ ಸರ್ವರ್ ಓಪನ್ ಮಾಡುತ್ತದೆ. ಸಾಮಾನ್ಯವಾಗಿ ತಿಂಗಳ ಕೆಲವು ದಿನಗಳಲ್ಲಿ ಅಥವಾ ಹೊಸ ಯೋಜನೆಗಳ ಸಂದರ್ಭದಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ.
ಪ್ರಶ್ನೆ 2: ರೇಷನ್ ಕಾರ್ಡ್ ತಿದ್ದುಪಡಿ ಮಾಡಬಹುದೇ?ಉತ್ತರ: ಹೌದು, ಹೆಸರು ಸೇರ್ಪಡೆ, ಹೆಸರು ತೆಗೆಯುವುದು ಅಥವಾ ವಿಳಾಸ ಬದಲಾವಣೆಯನ್ನು ಕೂಡ ‘ಇ-ಸೇವೆ’ ವಿಭಾಗದಲ್ಲಿ ಮಾಡಬಹುದು.
ಪ್ರಶ್ನೆ 3: ಬಿಪಿಎಲ್ ಕಾರ್ಡ್ ಬರಲು ಎಷ್ಟು ದಿನ ಬೇಕು?ಉತ್ತರ: ಅರ್ಜಿ ಸಲ್ಲಿಸಿದ ನಂತರ ಅಧಿಕಾರಿಗಳ ಪರಿಶೀಲನೆಗೆ 15 ರಿಂದ 45 ದಿನಗಳ ಸಮಯ ಬೇಕಾಗಬಹುದು.
ಕರ್ನಾಟಕ ಪಡಿತರ ಚೀಟಿಯು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದ್ದು, ಅರ್ಹ ಕುಟುಂಬಗಳು ತಪ್ಪದೇ ಇದನ್ನು ಮಾಡಿಸಿಕೊಳ್ಳಬೇಕು. ಆನ್‌ಲೈನ್ ಪ್ರಕ್ರಿಯೆಯು ಪಾರದರ್ಶಕವಾಗಿದ್ದು, ನೀವು ಮೊಬೈಲ್ ಅಥವಾ ಹತ್ತಿರದ ಜನಸೇವಾ ಕೇಂದ್ರಗಳ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ನಿಮ್ಮ ದಾಖಲೆಗಳನ್ನು ಸದಾ ಅಪ್‌ಡೇಟ್ ಆಗಿಟ್ಟುಕೊಳ್ಳಿ.