Pm mudra yojana : ಪ್ರಧಾನಮಂತ್ರಿ ಮುದ್ರ ಯೋಜನೆ ಎಂದರೇನು!
Pm mudra yojana:ಸಂತ ಉದ್ಯೋಗ ಆರಂಬಿಸವ ಕನಸು ಬಹುತೇಕರದ್ದಾಗಿರುತ್ತದೆ ,ಆದರೆ ಆರಂಭಿಕ ಬಂಡವಾಳದ ಕೊರತೆಯಿಂದ ಅನೇಕರು ತಮ್ಮ ಕನಸನ್ನು ನನಸಾಗಿಸಲು ಸಾಧ್ಯವಾಗುವುದಿಲ್ಲ ,ಈ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಭಾರತ ಸರ್ಕಾರವು ಪ್ರಧಾನಮಂತ್ರಿ ಮುದ್ರ ಯೋಜನೆ (PMMY) ಯನ್ನು 2015 ಏಪ್ರಿಲ್ 8ರಂದು ಆರಂಬಿಸಿತು, ಈ ಯೋಜನೆಯಡಿ ಸಣ್ಣ ಉದ್ಯಮಿಗಳು ,ಯುವಕರು ,ಮಹಿಳೆಯರು, ಸ್ವಯಂ ಉದ್ಯೋಗಿಗಳು ಮತ್ತು ಸೂಕ್ಷ್ಮ ವ್ಯಾಪಾರಿಗಳಿಗೆ ಬ್ಯಾಂಕುಗಳ ಮೂಲಕ ಸಾಲ ನೀಡಲಾಗುತ್ತದೆ
ಮುದ್ರ (MUDRA) ಎಂದರೇನು?
MUDRA ಎಂದರೆ micro units development and refinance agency
ಈ ಸಂಸ್ಥೆಯು ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳಿಗೆ ಹಣಕಾಸಿನ ನೆರವು ಲಭ್ಯವಾಗುವಂತೆ ಮಾಡಲು ಕಾರ್ಯನಿರ್ವಹಿಸುತ್ತದೆ ಮುದ್ರ ಯೋಜನೆಯ ಮೂಲಕ ಬ್ಯಾಂಕುಗಳು ಮತ್ತು ಸಂಸ್ಥೆಗಳು ಅರ್ಹ ಫಲಾನುಭವಿಗಳಿಗೆ ಸಾಲ ನೀಡುತ್ತವೆ

ಮುದ್ರ ಯೋಜನೆಯಡಿ ದೊರೆಯುವ ಸಾಲದ ವಿಭಾಗಗಳು!
1 ಶಿಶು (Shishu)
- ₹50,000 ವರೆಗೆ ಸಾಲ
- ಹೊಸ ಉದ್ಯಮ ಆರಂಭಿಸುವವರಿಗೆ ಸೂಕ್ತ
- ಸಣ್ಣ ಮಟ್ಟದ ವ್ಯಾಪಾರಿಗಳಿಗೆ ಉಪಯುಕ್ತ
2 ಕಿಶೋರ್ (Kishore)
- ₹50.001 ರಿಂದ ₹5 ಲಕ್ಷದವರೆಗೆ
- ಈಗಾಗಲೇ ವ್ಯಾಪಾರ ನಡೆಸುತ್ತಿರುವವರು ವಿಸ್ತರಣೆಗಾಗಿ ಪಡೆಯಬಹುದು
3 ತರುಣ (Tarun)
- ₹5 ಲಕ್ಷ ದಿಂದ ₹10 ಲಕ್ಷದವರೆಗೆ (ಅನ್ವಯಿಸುವ ನಿಯಮಗಳ ಪ್ರಕಾರ ಹೆಚ್ಚಿನ ಮಿತಿಯೂ ಲಭ್ಯವಾಗಬಹುದು
- ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಲು ಬಯಸುವವರು
ಯಾರು ಮುದ್ರ ಯೋಜನೆಗೆ ಅರ್ಹರು!
- ಸಣ್ಣ ವ್ಯಾಪಾರಿಗಳು
- ಮಹಿಳಾ ಉದ್ಯಮಿಗಳು
- ಯುವ ಉದ್ಯಮಿಗಳು
- ಸ್ವಯಂ ಉದ್ಯೋಗಿಗಳು
- ಅಂಗಡಿ ಮಾಲೀಕರು
- ಬೀದಿ ವ್ಯಾಪಾರಿಗಳು
- ಕಿರಾಣಿ ಅಂಗಡಿ ನಡೆಸುವವರು
- ಹೊಲಿಗೆ ಕೇಂದ್ರ ನಡೆಸುವವರು
- ಬ್ಯೂಟಿ ಪಾರ್ಲರ್ ಮಾಲೀಕರು
- ಬೇಕರಿ ಉದ್ಯಮಿಗಳು
- ಮೊಬೈಲ್ ರಿಪೇರಿ ಅಂದಡಿ ನೆಡಸುವವರು
- ಕೃಷಿ ಸಂಬಂಧಿತ ಆದಾಯ ತರುವ ಚಟುವಟಿಕೆಗಳಲ್ಲಿ ತೊಡಗಿರುವವರು
ಅಗತ್ಯ ದಾಖಲೆಗಳು!
ಅರ್ಜಿಯ ಸಲ್ಲಿಸಲು ಸಾಮಾನ್ಯವಾಗಿ ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಮತದಾರರ ಗುರುತಿನ ಚೀಟಿ ಅಥವಾ ವಿಲಾಸ ಪುರಾವೆ
- ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ
- ಬ್ಯಾಂಕ್ ಖಾತೆಯ ವಿವರ
- ವ್ಯವಹಾರದ ಯೋಜನಾ ವರದಿ(ಅಗತ್ಯವಿದ್ದರೆ)
- ಆದಾಯ ಅಥವಾ ವ್ಯವಹಾರ ಕ್ಕೆ ಸಂಬಂಧಿಸಿದ ದಾಖಲೆಗಳು
- ಜಿ ಎಸ್ ಟಿ ಅಥವಾ ಅಂಗಡಿಯ ಪರವಾನಗಿ (ಅನ್ವಯಿಸಿದರೆ)
ಮುದ್ರ ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ!
- ಹಂತ 1ಹತ್ತಿರದ ಸರ್ಕಾರಿ ಅಥವಾ ಖಾಸಗಿ ಬ್ಯಾಂಕ್ ಗೆ ಭೇಟಿ ನೀಡಿ
- ಹಂತ 2 ಮುದ್ರ ಸಾಲದ ಅರ್ಜಿ ನಮೂನೆ ಪಡೆದುಕೊಳ್ಳಿ
- ಹಂತ 3 ಎಲ್ಲಾ ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
- ಹಂತ 4 ಅಗತ್ಯ ದಾಖಲೆಗಳನ್ನು ಲಗತ್ತಿಸಿ
- ಹಂತ5 ಬ್ಯಾಂಕ್ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತಾರೆ
- ಹಂತ6 ಅರ್ಜಿ ಅನುಮೋದನೆ ಆದ ನಂತರ ಸಾಲವನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ
ಯಾವ ಬ್ಯಾಂಕುಗಳಲ್ಲಿ ಮುದ್ರ ಸಾಲ ಲಭ್ಯ!
- ಸರ್ಕಾರಿ ಬ್ಯಾಂಕುಗಳು
- ಖಾಸಗಿ ಬ್ಯಾಂಕುಗಳು
- ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು
- ಸಹಕಾರಿ ಬ್ಯಾಂಕುಗಳು
- ಸಣ್ಣ ಹಣಕಾಸು ಬ್ಯಾಂಕುಗಳು
- ಸೂಕ್ಷ್ಮ ಹಣಕಾಸು ಸಂಸ್ಥೆಗಳು (MFLS)
- NBFC ಗಳು
ಮಹಿಳೆಯರಿಗೆ ಮುದ್ರ ಯೋಜನೆಯ ಪ್ರಯೋಜನ
- ಮಹಿಳಾ ಉದ್ಯಮಿಗಳಿಗೆ ಮುದ್ರ ಯೋಜನೆ ವಿಶೇಷವಾಗಿ ಉಪಯುಕ್ತವಾಗಿದೆ.
- ಈ ಯೋಜನೆಯ ಸಹಾಯದಿಂದ ಅನೇಕ ಮಹಿಳೆಯರು
- ಬ್ಯೂಟಿ ಪಾರ್ಲರ್
- ಟೈಲರಿಂಗ್ ಸೆಂಟರ್
- ಬೇಕರಿ
- ಫುಡ್ ಪ್ರೊಸೆಸಿಂಗ್
- ಕಿರಾಣಿ ಅಂಗಡಿ
- ಹಾಲು ಉತ್ಪಾದನೆ
- ಆನ್ಲೈನ್ ವ್ಯವಹಾರ
ಇತ್ಯಾದಿ ಉದ್ಯಮಗಳನ್ನು ಆರಂಭಿಸಿ ಯಶಸ್ವಿಯಾಗಿದ್ದಾರೆ.
ಯುವಕರಿಗೆ ಮುದ್ರ ಯೋಜನೆಯ ಮಹತ್ವ!
ಇಂದಿನ ಯುವಕರು ಉದ್ಯೋಗಕ್ಕಾಗಿ ಮಾತ್ರ ಕಾಯದೆ ಸ್ವಂತ ಉದ್ಯಮ ಆರಂಭಿಸಲು ಮುಂದಾಗುತ್ತಿದ್ದಾರೆ.
ಮುದ್ರ ಯೋಜನೆಯ ನೆರವಿನಿಂದ:
- ಸ್ಟಾರ್ಟ್ಅಪ್ ಆರಂಭಿಸಬಹುದು
- ಸಣ್ಣ ಕೈಗಾರಿಕೆ ಸ್ಥಾಪಿಸಬಹುದು
- ಸೇವಾ ಉದ್ಯಮ ಆರಂಭಿಸಬಹುದು
- ಡಿಜಿಟಲ್ ವ್ಯವಹಾರ ಆರಂಭಿಸಬಹುದು
- ಹೊಸ ಉದ್ಯೋಗಗಳನ್ನು ಸೃಷ್ಟಿಸಬಹುದು
ಮುದ್ರ ಸಾಲ ಪಡೆಯುವ ಮೊದಲು ಗಮನಿಸಬೇಕಾದ ವಿಷಯಗಳು
ಅಗತ್ಯವಿರುವಷ್ಟು ಮಾತ್ರ ಸಾಲ ಪಡೆಯಿರಿ.ಸ್ಪಷ್ಟ ವ್ಯವಹಾರ ಯೋಜನೆ ತಯಾರಿಸಿಕೊಳ್ಳಿ.ಸಾಲವನ್ನು ನಿಗದಿತ ಉದ್ದೇಶಕ್ಕೆ ಮಾತ್ರ ಬಳಸಿ.ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ.ಬ್ಯಾಂಕ್ ನೀಡುವ ಎಲ್ಲಾ ನಿಯಮಗಳನ್ನು ಪಾಲಿಸಿ.
ಡಿಜಿಟಲ್ ಕನ್ನಡ ದಿಂದ ಸಲಹೆ
ಪ್ರಧಾನಮಂತ್ರಿ ಮುದ್ರ ಯೋಜನೆ ಭಾರತದಲ್ಲಿನ ಲಕ್ಷಾಂತರ ಸಣ್ಣ ಉದ್ಯಮಿಗಳಿಗೆ ಆಶಾಕಿರಣವಾಗಿ ಬಂಡವಾಳದ ಕೊರತೆಯಿಂದ ಅನೇಕರು ಉದ್ಯಮ ಆರಂಬಿಸಲ ಸಾಧ್ಯವಾಗುವುದಿಲ್ಲ ಈ ಯೋಜನೆ ಉತ್ತಮ ಅವಕಾಶ ಒದಗಿಸುತ್ತದೆ ಮಹಿಳೆಯರು ಮತ್ತು ಯುವಕರು ಮತ್ತು ಸ್ವಯಂ ಉದ್ಯೋಗವನ್ನು ಆಯ್ಕೆ ಮಾಡಲು ಬಯಸುವ ಎಲ್ಲರಿಗೂ ಇದು ಅತ್ಯಂತ ಉಪಯುಕ್ತ ಯೋಜನೆಯಾಗಿದೆ
ನೀವು ಸಹ ಸ್ವಂತ ಉದ್ಯಮ ಆರಂಭಿಸುವ ಕನಸು ಹೊಂದಿದ್ದರೆ ಸರಿಯಾದ ವ್ಯವಹಾರ ಯೋಜನೆ ರೂಪಿಸಿ , ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ನಿಮ್ಮ ಅತ್ತಿರದ ಬ್ಯಾಂಕ್ನಲ್ಲಿ ಮುದ್ರ ಸಾಲದ ಕುರಿತು ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು ಸರಿಯಾದ ಯೋಜನೆ ಪರಿಶ್ರಮ ಮತ್ತು ಹಣಕಾಸಿನ ಶಿಸ್ತು ಇದ್ದರೆ ಮುದ್ರ ಯೋಜನೆ ನಿಮ್ಮ ಉದ್ಯಮದ ಯಶಸ್ಸಿಗೆ ಬಲವಾದ ಅಡಿಪಾಯವಾಗಬಹುದು