Telegram Join My Telegram   WhatsApp Join My WhatsApp

SBI Asha scholarship : SBIಆಶಾ ಸ್ಕಾಲರ್ ಶಿಪ್ 2026-27: ಅರ್ಹತೆ, ವಿದ್ಯಾರ್ಥಿವೇತನದ ಮೊತ್ತ, ಅಗತ್ಯ ದಾಖಲೆಗಳು ಮತ್ತು ಅರ್ಜಿ ಸಲ್ಲಿಸಲು ವಿಧಾನ

SBI Asha scholarship ಶಿಕ್ಷಣವು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನವನ್ನು ರೂಪಿಸುವ ಪ್ರಮುಖ ಅಸ್ತ್ರವಾಗಿದೆ. ಆದರೆ ಆರ್ಥಿಕ ಸಮಸ್ಯೆಗಳ  ಕಾರಣದಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರೆಸಲು ಕಷ್ಟಪಡುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ SBI ಫೌoಡೇಶನ್ ವಸತಿಯಿಂದ SBI ಆಶಾ ಸ್ಕಾಲರ್ ಶಿಪ್ (SBI ASHA Scholarship) ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ಈ ವಿದ್ಯಾರ್ಥಿವೇತನ ಯೋಜನೆಯ ಮುಖ್ಯ ಉದ್ದೇಶ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರೀತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರ ಶಿಕ್ಷಣವನ್ನು ನಿರಂತರವಾಗಿ ಮುಂದುವರೆಸಲು ಸಹಾಯ ಮಾಡುವುದು. ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ಪದವಿ ಸ್ನಾತಕೋತ್ತರ, ವೈದ್ಯಕೀಯ, ಐಐಟಿ, ಐಐಎಂ ಹಾಗೂ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೂ ವಿವಿಧ ವಿಭಾಗಗಳ ಮೂಲಕ ಈ ಯೋಜನೆ ನೆರವು ನೀಡುತ್ತದೆ.

SBI ಆಶಾ ಸ್ಕಾಲರ್ ಶಿಪ್ ಎಂದರೆ!

SBI ಆಶಾ ಸ್ಕಾಲರ್ ಶಿಪ್ ಭಾರತದಲ್ಲಿನ ಪ್ರಮುಖ ಖಾಸಗಿ ವಿದ್ಯಾರ್ಥಿವೇತನ ಯೋಜನೆಯಲ್ಲಿ ಒಂದಾಗಿದೆ. ಇದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ CSR ಘಟಕವಾದ SBI ಫೌOಡೇಶನ್ ವತಿಯಿಂದ ನಡೆಸಲಾಗುತ್ತದೆ. ಈ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕ ವರ್ಷದ ಮಟ್ಟಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಅರ್ಹತೆಯನ್ನು ಮುಂದುವರೆಸಿದರೆ ಮುಂದಿನ ವರ್ಷಗಳಲ್ಲಿವು ನವೀಕರಣದ ಅವಕಾಶ ಇರಬಹುದು.

ಯೋಜನೆಯ ಉದ್ದೇಶಗಳು!

-ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಬೆಂಬಲ.

-ಪ್ರತಿಭವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಅವಕಾಶ.

-ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ನಿರಂತರ ಸಹಾಯ.

-ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಉತ್ತೇಜನ.

ಯಾವ ವಿದ್ಯಾರ್ಥಿಗಳು ಸಲ್ಲಿಸಬಹುದು?

SBI ಆಶಾ ಸ್ಕಾಲರ್ ಶಿಪ್ ನಲ್ಲಿ ವಿವಿಧ ವಿಭಾಗಗಳಿದ್ದು, ಸಾಮಾನ್ಯವಾಗಿ ಈ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು:

9ರಿಂದ 12ನೇ ತರಗತಿ ವಿದ್ಯಾರ್ಥಿಗಳು.

ಪದವಿ (UG) ವಿದ್ಯಾರ್ಥಿಗಳು.

ಸ್ನಾತಕೋತ್ತರ (PG) ವಿದ್ಯಾರ್ಥಿಗಳು.

MMBS ವಿದ್ಯಾರ್ಥಿಗಳು.

ITI ವಿದ್ಯಾರ್ಥಿಗಳು.

IIM ವಿದ್ಯಾರ್ಥಿಗಳು.

ವಿದೇಶದಲ್ಲಿ ಸ್ನಾತಕೋತ್ತರ ಅಥವಾ ಮೇಲ್ದರ್ಜಿಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು.

ಪ್ರತಿ ವಿಭಾಗಕ್ಕೂ ಕನಿಷ್ಠ ಅಂಕಗಳು, ಕುಟುಂಬದ ವಾರ್ಷಿಕ ಆದಾಯ ಮಿತಿ ಮತ್ತು ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ ಪ್ರತ್ಯೇಕ ಅರ್ಹತಾ ನಿಯಮಗಳಿರುತ್ತವೆ.

ವಿದ್ಯಾರ್ಥಿ ವೇತನದ ಮೊತ್ತ:

ವಿಭಾಗವನ್ನು ಅವಲಂಬಿಸಿ ನೆರವಿನ ಮೊತ್ತ ಬದಲಾಗುತ್ತದೆ. ಉದಾಹರಣೆಗೆ:

-9-12ನೇ ತರಗತಿ:₹15,000 ವರೆಗೆ

-ಪದವಿ: l ₹75,000 ವರೆಗೆ

-ಸ್ನಾತಕೋತ್ತರ: ₹1,50,000 ವರೆಗೆ

-MMBS: ₹2,00,000 ವರೆಗೆ

-ITI: ₹2,00,000 ವರೆಗೆ

-IIM: 5,00,000 ವರೆಗೆ

ವಿದೇಶಿ ಉನ್ನತ ಶಿಕ್ಷಣ: ₹ 15,00,000 ವರೆಗೆ

ಈ ಮೊತ್ತವು ಆಯ್ಕೆಗೊಂಡ ವಿಭಾಗ ಮತ್ತು ಅನ್ವಯಿಸುವ ನಿಯಮಗಳ ಪ್ರಕಾರ ನೀಡಲಾಗುತ್ತದೆ.

ಅಗತ್ಯ ದಾಖಲೆಗಳು?

ಅರ್ಜಿಯ ಸಮಯದಲ್ಲಿ ಸಾಮಾನ್ಯವಾಗಿ ಈ ದಾಖಲೆಗಳು ಬೇಕಾಗಬಹುದು:

-ಆಧಾರ್ ಕಾರ್ಡ್ ಅಥವಾ ಸರ್ಕಾರದ ಚೀಟಿ

-ಇತ್ತೀಚಿನ ಅಂಕಪಟ್ಟಿ

-ಪ್ರವೇಶ ಪಡೆದಿರುವ ಪುರಾವೆ

-ಕುಟುಂಬದ ಅಧ್ಯಯ ಪ್ರಮಾಣ ಪತ್ರ

-ಪಾಸ್ಪೋರ್ಟ್ ಗಾತ್ರದ ಫೋಟೋ

-ಬ್ಯಾಂಕ್ ಖಾತೆ ವಿವರ

-ಜಾತಿ ಪ್ರಮಾಣ ಪತ್ರ (ಅನ್ವಯಿಸಿದರೆ)

-ಅಂಗವೈಕಲ್ಯ ಪ್ರಮಾಣ ಪತ್ರ (ಅನ್ವಯಿಸಿದರೆ)

ವಿಭಾಗಗಳ ಪ್ರಕಾರ ಹೆಚ್ಚುವರಿ ದಾಖಲೆಗಳ ಅಗತ್ಯವೂ ಇರಬಹುದು

ಅರ್ಜಿ ಸಲ್ಲಿಸುವ ವಿಧಾನ?

1. ಅಧಿಕೃತ SBI ಆಶಾ ಸ್ಕಾಲರ್ ಶಿಪ್ ಪೋರ್ಟಲ್ಗೆ ಭೇಟಿ ನೀಡಿ.

2. ಹೊಸ ಬಳಕೆದಾರರಾಗಿ ನೋಂದಣಿ ಮಾಡಿ.

3. ನಿಮ್ಮ ವಿಭಾಗವನ್ನು ಆಯ್ಕೆ ಮಾಡಿ.

4. ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.

5.  ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.

6.ಮಾಹಿತಿಯನ್ನು ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಿ.

7. ಅರ್ಜಿಯ ಸ್ತಿತಿಯನ್ನು ಪೋರ್ಟಲ್ ನಲ್ಲಿ ಪರಿಶೀಲಿಸಬಹುದು.

ಆಯ್ಕೆ ಪ್ರಕ್ರಿಯೆ?

ಅರ್ಜಿಯನ್ನು ಪರಿಶೀಲಿಸಿದ ನಂತರ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.ಅಗತ್ಯವಿದ್ದಲ್ಲಿ ದಾಖಲೆ ಪರಿಶೀಲನೆ ಅಥವಾ ದೃಢೀಕರಣ ಪ್ರಕ್ರಿಯೆಯೂ ಇರಬಹುದು.ಅಂತಿಮ ಆಯ್ಕೆ ಯೋಜನೆಯ ನಿಯಮಗಳು ಮತ್ತು ಲಭ್ಯವಿರುವ ವಿದ್ಯಾರ್ಥಿವೇತನಗಳ ಆಧಾರದ ಮೇಲೆ ನಡೆಯುತ್ತದೆ.

ವಿದ್ಯಾರ್ಥಿಗಳಿಗೆ ಈ ಯೋಜನೆಯ ಪ್ರಯೋಜನಗಳು!

ಶಿಕ್ಷಣದ ವೆಚ್ಚವನ್ನು ಕಡಿಮೆ ಮಾಡುತ್ತದೆ.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಭದ್ರತೆ ಒದಗಿಸುತ್ತದೆ.

ಉನ್ನತ ಶಿಕ್ಷಣ ಮುಂದುವರೆಸಲು ಪ್ರೋತ್ಸಾಹಿಸುತ್ತದೆ.

ಆರ್ಥಿಕ ಅಡೆಚಡನೆಯಿಂದ ವಿಧ್ಯಾ ಭ್ಯಾಸ ನಿಲ್ಲದಂತೆ ಸಹಾಯ ಮಾಡುತ್ತದೆ.

ಗ್ರಾಮೀಣ ಮತ್ತು ನಗರ ಪ್ರದೇಶದ ಸಮಾನ ಅವಕಾಶ ಒದಗಿಸಿಕೊಡುತ್ತದೆ.

ಅರ್ಜಿಯಲ್ಲಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ.

ಅಧಿಕೃತ ದಾಖಲೆಗಳಿರುವ ಮಾಹಿತಿಯನ್ನೇ ಬಳಸಿ.

ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.

ತಪ್ಪು ಅಥವಾ ಅಪೂರ್ಣ ಮಾಹಿತಿಯನ್ನು ನೀಡಬೇಡಿ.

ಅಧಿಕೃತ ಪೋರ್ಟಲ್ ನಲ್ಲಿನ ಇತ್ತೀಚಿನ ಮಾರ್ಗಸೂಚಿಗಳನ್ನ ಓದಿ.

ಡಿಜಿಟಲ್ ಕನ್ನಡ ತನ್ನ ಓದುಗರಿಗೆ ನಿಖರವಾದ ಮಾಹಿತಿಯನ್ನು ನೀಡುತ್ತದೆ ಮತ್ತು ಅಧಿಕೃತ ಮಾಹಿತಿ ಮತ್ತು ಅವುಗಳನ್ನು ಹೇಗೆ ಪಡೆಯಬಹುದು ಎಂಬುದನ್ನು ಸ್ಪಷ್ಟವಾಗಿ ಲೇಖನದಲ್ಲಿ ನೋಡಬಹುದು ಹಾಗೆ ಯಾವರೀತಿ ಅರ್ಜಿ ಸಲ್ಲಿಸುವುದು ಮತ್ತು ಹೇಗೆ ಯೋಜನೆಯ ಲಾಭ ಪಡೆಯಬಹುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ

            APPLY LINK 

WhatsApp Group Join Now
Telegram Group Join Now

Leave a Comment