VB- G RAM G ಗ್ಯಾರಂಟಿ ಎಂದರೇನು?
• VB- G RAM G ಬಿಡುಗಡೆ ದಿನಾಂಕ: ಜುಲೈ 1, 2026
• ಉದ್ಯೋಗದ ಗುರಿ: ಗ್ರಾಮೀಣ ಕುಟುಂಬಕ್ಕೆ 125 ದಿನಗಳ ಕಾತರಿಯ ಕೆಲಸ (MGNREGA ಅಡಿಯಲ್ಲಿ 100 ದಿನಗಳಿಗಿಂತ ಏರಿಕೆ)
• ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಹಣಕಾಸಿನ ಅನುಪಾತ: 60:40, ಕರ್ನಾಟಕದ ಮೇಲೆ ಆರ್ಥಿಕ ಹೊರೆ ಹೆಚ್ಚಿಸುತ್ತಿದೆ.
• ಪ್ರಸ್ತುತ ಪ್ರಗತಿ: ಜುಲೈ 2026ರ ಅಂತ್ಯದ ವೇಳೆಗೆ ಜಿಲ್ಲೆಗಳಲ್ಲಿ 5 ಲಕ್ಷ ಮಾನವ ದಿನಗಳ ಕೆಲಸವನ್ನು ಸೂಚಿಸಲಾಗಿದೆ, ಮಾಸಿಕ ಹೆಚ್ಚಿನ ನಿಯೋಜನೆಯನ್ನು ಗುರಿಯಾಗಿರಿಸುಕೊಂಡಿವೆ.
• ಅನುಮೋದಿತ ಕೃತಿಗಳು: ಕೃಷಿ ಹೊಡಗಳು, ಶಾಲಾ ಕಟ್ಟಡ ದುರಸ್ತಿ, ಹನಿ ನೀರಾವರಿ ಮತ್ತು ಕಿರು ಅರಣ್ಯಗಳು ಸೇರಿದಂತೆ 318ಕ್ಕೂ ಹೆಚ್ಚು ವಿಭಾಗಗಳು.
VB- G RAM G ರಾಜಕೀಯ ಮತ್ತು ಕಾನೂನು ನಿಲುವು?
• ರಾಜ್ಯ ವಿರೋಧ: ಕರ್ನಾಟಕದ ಶಾಸಕಾಂಗವು MGNAREGA ರದ್ದುಗೊಳಿಸುವಿಕೆಯನ್ನು ವಿರೋಧಿಸಿ ಔಪಚಾರಿಕ ನಿರ್ಣಯವನ್ನು ಅಂಗೀಕರಿಸಿತು. ಹೊಸ ಚೌಕಟ್ಟು ಪಂಚಾಯತ್ ಸ್ವಾಯತ್ತತೆಯನ್ನು ಕಡಿಮೆ ಮಾಡುತ್ತದೆ ವಾದಿಸಿತು

• ಕಾನೂನು ಕ್ರಮ : ರಚನಾತ್ಮಕ ಬದಲಾವಣೆಗಳು ಮತ್ತು ಹಣಕಾಸು ವರ್ಗಾವಣೆ ಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕಾನೂನು ಆಯ್ಕೆಗಳು ಮತ್ತು ನ್ಯಾಯಾಲಯದ ಸವಾಲುಗಳನ್ನು ಪರಿಶೀಲಿಸಿದೆ.
ವಿ.ವಿ-ಜಿ ರಾಮ್ ಜಿ (VB-G RAM G – Viksit bharat – guarantee for Rozgar and Aajeevika mission) ಎಂಬುವ ಗ್ರಾಮೀಣ ಜನರಿಗೆ ಉದ್ಯೋಗ, ಜೀವನೋಪಾಯ ಮತ್ತು ಗ್ರಾಮೀಣ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಉದ್ಯೋಗ ಖಾತರಿ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶಗಳ ನಿರುದ್ಯೋಗವನ್ನು ಕಡಿಮೆ ಮಾಡುವುದು, ಬಡ ಕುಟುಂಬಗಳ ಆದಾಯವನ್ನು ಹೆಚ್ಚಿಸುವುದು ಮತ್ತು ಶಾಶ್ವತ ಸಾರ್ವಜನಿಕ ಆಸ್ತಿಗಳನ್ನು ನಿರ್ಮಿಸುವದು ಮುಖ್ಯ ಗುರಿಯಾಗಿದೆ. ಗ್ರಾಮ ಪಂಚಾಯಿತಿಗಳ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಕೆಲಸ ಮಾಡಲು ಸಿದ್ದರಾಗಿರುವ ಅರ್ಹ ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ನೀಡಲಾಗುತ್ತದೆ.
VB- G RAM G ಯೋಜನೆಯ ಹಿನ್ನೆಲೆ!
ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಮತ್ತು ಬಡತನವು ಹಲವು ವರ್ಷಗಳಿಂದ ಪ್ರಮುಖ ಸಮಸ್ಯೆಯಾಗಿವೆ. ಕೃಷಿ ಚಟುವಟಿಕೆಗಳು ವರ್ಷಪೂರ್ತಿ ನಡೆಯುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಉದ್ಯೋಗ ಖಾತರಿ ಯೋಜನೆಗಳನ್ನು ರೂಪಿಸಲಾಗಿದೆ. VB-G RAM G ಯೋಜನೆಯ ಉದ್ದೇಶ ಗ್ರಾಮೀಣ ಜನರಿಗೆ ಹೆಚ್ಚಿನ ದಿನಗಳ ಉದ್ಯೋಗ ಒದಗಿಸಿ ಅವರ ಜೀವನಮಟ್ಟವನ್ನು ಸುಧಾರಿಸುವುದು ಆಗಿರುತ್ತದೆ.
VB- G RAM G ಯೋಜನೆಯ ಪ್ರಮುಖ ಉದ್ದೇಶಗಳು!
• ಗ್ರಾಮೀಣ ಬಡ ಕುಟುಂಬಗಳಿಗೆ ಉದ್ಯೋಗದ ಭದ್ರತೆ ಒದಗಿಸುವುದು.
• ನಿರುದ್ಯೋಗವನ್ನು ಕಡಿಮೆ ಮಾಡುವುದು.
• ಗ್ರಾಮೀಣ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು.
• ಮಹಿಳೆಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವುದು.
• ಕೃಷಿಗೆ ಪೂರಕವಾದ ಕಾಮಗಾರಿಗಳನ್ನು ಕೈಗೊಳ್ಳುವುದು
• ನೀರಿನ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವುದು.
• ಬಡತನ ನಿವಾರಣೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದು.
VB- G RAM G ಯೋಜನೆಯ ಪ್ರಮುಖ ಲಕ್ಷಣಗಳು!
– ಈ ಯೋಜನೆಯಡಿ ಅರ್ಹ ಕುಟುಂಬಗಳಿಗೆ ವರ್ಷದಲ್ಲಿ 125 ದಿನಗಳವರೆಗೆ ಕೂಲಿ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ.
– ಗ್ರಾಮ ಪಂಚಾಯಿತಿಗಳ ಮೂಲಕ ಕೆಲಸ ಹಂಚಿಕೆ ಮಾಡಲಾಗುತ್ತದೆ.
– ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಸ್ಥಳೀಯ ಮಟ್ಟದಲ್ಲಿ ಕೆಲಸ ನೀಡಲು ಆದ್ಯತೆ ನೀಡಲಾಗುತ್ತದೆ.
– ಕೆಲಸ ಮಾಡಿದ ಕೂಲಿಯನ್ನು ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.
– ಇದರಿಂದ ಪಾರದರ್ಶಕತೆ ಹೆಚ್ಚುತ್ತದೆ ಮತ್ತು ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗುತ್ತದೆ.
VB- G RAM G ಯೋಜನೆಯ ಫಲಾನುಭವಿಗಳು!
ಯು ಯೋಜನೆಯ ಪ್ರಯೋಜನವನ್ನು ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾದಿಸುವ ಬಡ ಕುಟುಂಬಗಳು ಪಡೆಯಬಹುದು ವಿಶೇಷವಾಗಿ:
• ಭೂಹಿನ ಕಾರ್ಮಿಕರು
• ಸಣ್ಣ ಮತ್ತು ಅತಿ ಸಣ್ಣ ರೈತರು
• ಮಹಿಳೆಯರು
•ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಟುಂಬಗಳು
•ಆರ್ಥಿಕವಾಗಿ ದುರ್ಬಲ ವರ್ಗದ ಜನರು
ಕೆಲಸ ಮಾಡಲು ಸಿದ್ದರಾಗಿರುವ ಯಾವುದೇ ಅರ್ಹ ಕುಟುಂಬವು ಗ್ರಾಮ ಪಂಚಾಯಿತಿಯಲ್ಲಿ ನೋಂದಣಿ ಮಾಡಿಕೊಂಡು ಯೋಜನೆ ಲಾಭ ಪಡೆಯಬಹುದು.
ಮಹಿಳೆಯರ ಪಾತ್ರ?
ಈ ಯೋಜನೆಯಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಮಹಿಳೆಯರು ಕೂಲಿ ಕೆಲಸಗಳಲ್ಲಿ ಭಾಗವಹಿಸುವುದರಿಂದ ಅವರ ಆರ್ಥಿಕ ಸ್ವಲಂಬನೆ ಹೆಚ್ಚುತ್ತದೆ. ಕುಟುಂಬದ ಆದಾಯವು ಹೆಚ್ಚಾಗುತ್ತದೆ ಮಹಿಳಾ ಸ್ವಸಹಕ ಸಂಘಗಳ ಮೂಲಕ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜನ ನೀಡಲಾಗುತ್ತದೆ.
ಗ್ರಾಮೀಣಾಭಿವೃದ್ಧಿಗೆ ಯೋಜನೆಯ ಕೊಡುಗೆ?
VB- G RAM G ಯೋಜನೆಯು ಕೇವಲ ಉದ್ಯೋಗ ನೀಡುವ ಯೋಜನೆ ಎಲ್ಲಾ ಇದು ಗ್ರಾಮೀಣ ಅಭಿವೃದ್ಧಿಗೆ ಸಹ ಪ್ರಮುಖ ಪಾತ್ರ ವಹಿಸುತ್ತದೆ. ರಸ್ತೆ, ಕೆರೆ, ನೀರಿನ ಮೂಲಗಳು, ಶಾಲೆಗಳು ಮತ್ತು ಇತರ ಸಾರ್ವಜನಿಕ ಆಸ್ತಿಗಳ ನಿರ್ಮಾಣದಿಂದ ಗ್ರಾಮಗಳ ಮೂಲಸೌಕರ್ಯ ಸುಧಾರಿಸುತ್ತದೆ. ನೀರಿನ ಸಂರಕ್ಷಣೆ ಪರಿಸರ ರಕ್ಷಣೆ ಹಾಗೂ ಕೃಷಿ ಉತ್ಪಾದಕತೆ ಹೆಚ್ಚಿಸಲು ಸಹ ಈ ಕಾಮಗಾರಿಗಳು ನೆರವಾಗಿರುತ್ತವೆ.
ಯೋಜನೆಯ ಪ್ರಯೋಜನಗಳು!
• ಗ್ರಾಮೀಣ ನಿರುದ್ಯೋಗ ಕಡಿಮೆಯಾಗುತ್ತದೆ.
• ಬಡ ಕುಟುಂಬಗಳ ಆದಾಯ ಸಿಗ್ತದೆ.
• ವಲಸೆ ಹೋಗುವವರ ಸಂಖ್ಯೆ ಕಡಿಮೆಯಾಗಬಹುದು.
• ಗ್ರಾಮಗಳಲ್ಲಿ ಶಾಶ್ವತ ಅಭಿವೃದ್ಧಿ ಕಾಮಗಾರಿಗಳು ನಿರ್ಮಾಣವಾಗುತ್ತವೆ.
• ಮಹಿಳೆಯರಿಗೆ ಉದ್ಯೋಗ ಮತ್ತು ಆರ್ಥಿಕ ಸಬಲೀಕರಣ ಸಿಗುತ್ತದೆ.
• ಖುಷಿಗೆ ಅಗತ್ಯವಾದ ಮೂಲಸೌಕರ್ಯ ಅಭಿವೃದ್ಧಿಯಾಗುತ್ತದೆ.
• ಪರಿಸರ ಸಂರಕ್ಷಣೆಗೆ ಸಹಕಾರ ದೊರೆಯುತ್ತದೆ.
ಸವಾಲುಗಳು?
ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಕೆಲವು ಸವಾಲುಗಳು ಇವೆ. ಸಮರ್ಪಕ ಹಣಕಾಸಿನ ಲಭ್ಯತೆ, ಸಮಯಕ್ಕೆ ಸರಿಯಾಗಿ ಕೂಲಿ ಪಾವತಿ, ಕಾಮಗಾರಿಗಳ ಗುಣಮಟ್ಟ, ಸ್ಥಳೀಯ ಆಡಳಿತದ ಸಮನ್ವಯ ಮತ್ತು ಪಾರದರ್ಶಕತೆ ಕಾಪಾಡುವುದು ಮುಖ್ಯ ಸವಾಲುಗಳಾಗಿವೆ. ಇವುಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ ಯೋಜನೆಯ ಪರಿಣಾಮ ಇನ್ನಷ್ಟು ಉತ್ತಮವಾಗಬಹುದು.
ತೀರ್ಮಾನ?
VB- G RAM G ಯೋಜನೆಯ ಗ್ರಾಮೀಣ ಜನರಿಗೆ ಉದ್ಯೋಗದ ಭದ್ರತೆ ಆದಾಯ ಹೆಚ್ಚಳ ಉತ್ತಮ ಜೀವನ ಮಟ್ಟವನ್ನು ಒದಗಿಸುವ ಮಹತ್ವದ ಯೋಜನೆಯಾಗಿದೆ. ಇದರ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸುವುದರ ಜೊತೆಗೆ ಶಾಶ್ವತ ಸಾರ್ವಜನಿಕ ಆಸ್ತಿಗಳ ನಿರ್ಮಾಣಕ್ಕೂ ಉತ್ತೇಜನ ದೊರೆಯುತ್ತದೆ. ಮಹಿಳಾ ಸಬಲೀಕರಣ, ಬಡತನ ನಿವಾರಣೆ, ಪರಿಸರ ಸಂರಕ್ಷಣೆ ಮತ್ತು ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗೆ ಈ ಯೋಜನೆ ನೆರವಾಗುವ ನಿರೀಕ್ಷೆ ಇದೆ. ಸರ್ಕಾರ ಗ್ರಾಮ ಪಂಚಾಯಿತಿಗಳು ಮತ್ತು ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ VB- G RAM G ಯೋಜನೆಯು ಗ್ರಾಮೀಣ ಅಭಿವೃದ್ಧಿಯಲ್ಲಿ ಮಹತ್ವದ ಮೈಲುಗಲ್ಲಾಗಬಹುದು. ಈ ಯೋಜನೆಯ ಯಶಸ್ವಿ ಅನುಷ್ಠಾನದಿಂದ ಗ್ರಾಮೀಣ ಆರ್ಥಿಕತೆ ಬಲಗೊಂಡು, ಸ್ವಾವಲಂಬ ಗ್ರಾಮೀಣ ನಿರ್ಮಾಣಕ್ಕೆ ಹಾಗೂ ವಿಕಾಸಿತ ಭಾರತ 2047
Digital Kannada ತನ್ನ ಓದುಗರರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಯನ್ನು ನೀಡುತ್ತದೆ ಹಾಗೂ ಯಾವುದೇ ಅನಧಿಕೃತ ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತುವುದಿಲ್ಲ ಕೇವಲ ಅಧಿಕೃತ ಮಾಹಿತಿಯನ್ನು ಮತ್ತು ಸರಿಯಾದ ಮಾಹಿತಿಯನ್ನು ಮಾತ್ರ ಪ್ರಕಟ ಮಾಡಲಾಗುತ್ತದೆ ಎಂಬುದು ಅಷ್ಟೇ ನಿಜ ಧನ್ಯವಾದಗಳು