Telegram Join My Telegram   WhatsApp Join My WhatsApp

LPG New Rules 2026: ಅಗಸ್ಟ್ 1 ರಿಂದ ಹೊಸ LPG ನಿಯಮಗಳು ಜಾರಿ ಬುಕಿಂಗ್5 ಹೊಸ ಸಂಪರ್ಕ ದರ ಬದಲಾವಣಿ ಸಂಪೂರ್ಣ ಮಾಹಿತಿ

LPG New RULES 2026 : ಹೊಸ ತಿಂಗಳಗಳಿಗೆ ಮುಂಚಿತವಾಗಿ LPG ಗ್ರಾಹಕರಿಗೆ ಹಲವಾರು ಪ್ರಮುಖ ನಿಯಮಗಳು ಬದಲಾಗಿವೆ. ಬುಕಿಂಗ್, ರೀ ಫೀಲಿಂಗ್, ಹೊಸ ಸಂಪರ್ಕ ಸಬ್ಸಿಡಿ, PNG ಸಂಪರ್ಕದ ನಂತರ LPG ಸಲೆಂಡರ್ ಮತ್ತು OTP ಆಧರಿತ ವಿವರಣೆ ಎಲ್ಲಾ ಪ್ರಮುಖ ಬದಲಾವಣೆಗಳಾಗಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಹೊಸ ತಿಂಗಳ ಆರಂಭಕ್ಕೆ ಕೆಲವೇ ದಿನಗಳು ಉಳಿದಿವೆ. ಪ್ರತಿ ತಿಂಗಳಂತೆ ಈ ಬಾರಿಯೂ ಸಹ, LPG ಗ್ಯಾಸ್ ಸಿಲಿಂಡರ್ ಗಳು ಮತ್ತು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಗೆ ಸಂಬಂಧಿಸಿದ ಹಲವಾರು ಪ್ರಮುಖ ನಿಯಮಗಳ ಮೇಲೆ ಗಮನ ಹರಿಸಲಾಗುತ್ತಿದೆ. ಬುಕಿಂಗ್, ರೀ ಫಿಲ್ಲಿಂಗ್, ಹೊಸ ಸಂಪರ್ಕ, ಸಿಲಿಂಡರ್ ಸಲೆಂಡರ್, ಬೆಲೆ ಬದಲಾವಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಸರ್ಕಾರ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿವೆ. ನೀವು ಮನೆಯ LPG  ಸಿಲಿಂಡರ್ ಗಳು ಅಥವಾ PNG ಬಳಸುತ್ತಿದ್ದರೆ ಈ ನಿಯಮಗಳನ್ನು ತಿಳಿದುಕೊಳ್ಳುವುದು ಮುಖ್ಯ

ಭಾರತ್ ಗ್ಯಾಸ್ ಲೈಟ್ ಜಿಪ್ ಸೇವೆ ಆರಂಭ!

ಬಿಪಿಸಿಎಲ್ ಹೊಸ ಭಾರತ್ ಗ್ಯಾಸ್ ಲೈಟ್ ಜಿಪ್ ಸೇವೆಯನ್ನು ಆರಂಭಿಸಿದೆ. ಇದು ಉಚಿತ ವ್ಯಾಪಾರದ PLG ( FTL)  ಸೇವೆಯಾಗಿದ್ದು, ಇದರ ಮೂಲಕ ಗ್ರಾಹಕರು ಹೊಸ  LPG ಸಂಪರ್ಕ ಮತ್ತು ವೇಗದ ಸಿಲಿಂಡರ್ ವಿತರಣೆಯನ್ನು ಬಹಳ ಬೇಗನೆ ಪಡೆಯುತ್ತಾರೆ. ಈ ಸೇವೆಯ ಎರಡು ಪ್ರಮುಖ ಅನುಕೂಲಗಳೆಂದರೆ, ತ್ವರಿತ ಹೊಸ ಸಂಪರ್ಕ: ಬಹಳ ಸುಲಭ ಪ್ರಕ್ರಿಯೆಯಲ್ಲಿ LPG ಹೊಸ ಸಂಪರ್ಕ. ಎಕ್ಸ್ಪ್ರೆಸ್ ವಿತರಣೆ: ಮೊದಲಿಗಿಂತ ವೇಗವಾದ ಸಿಲಿಂಡರ್ ವಿತರಣೆ. ಪ್ರಸ್ತುತ, ಈ ಸೇವೆಯನ್ನು ಮೊಬೈಲ್ ನಲ್ಲಿ ಮಾತ್ರ ಪ್ರಾರಂಭಿಸಲಾಗಿದೆ. ಅದಾಗ್ಯೋ , ಆಗಸ್ಟ್ 15, 2026 ರೊಳಗೆ 24 ರಾಜ್ಯಗಳಾದ್ಯಂತ 100 ನಗರಗಳಲ್ಲಿ ಇದನ್ನು ಪ್ರಾರಂಭಿಸುವ ಯೋಜನೆಗಳಿವೆ.

LPG New Rules 2026 !

HPCL ಸ್ವಿಗ್ಗಿ ಜಂಟಿಯಾಗಿ HP ನವ್ಯ 10 ಕೆಜಿ LPG ಸಿಲಿಂಡರನ್ನು ಬಿಡುಗಡೆ  ಮಾಡಿವೆ. ಈ ಸಿಲಿಂಡರ್ ವಿಷಯವಾಗಿ ಸಣ್ಣ ಕುಟುಂಬಗಳು, ಪ್ಲಾಟ್ವಾ ಗಳಲ್ಲಿ ವಸಿಸುವ ಕೆಲಸ ಮಾಡುವ ಜನರು, ವಿದ್ಯಾರ್ಥಿಗಳು, ದ್ವಿತೀಯ LPG ಸಿಲಿಂಡರ್ ಬಳಕೆದಾರರಿಗೆ ಸೂಕ್ತವಾಗಿದೆ. HP ನವ್ಯ (10 ಕೆಜಿ) HP ಅಪ್ಪು ಗ್ಯಾಸ್ (5 ಕೆಜಿ) ಅನ್ನು ಸ್ವಿಗ್ಗಿ ಇನ್ ಸ್ಟಾ ಮಾರ್ಟಿನಿಂದ  ಆರ್ಡರ್ ಮಾಡಬಹುದು.  ಪ್ರಸ್ತುತ, ಸೇವೆ ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದೆ. ನೀವು ಮೊದಲ ಬಾರಿಗೆ ಸಿಲಿಂಡರ್ ಖರೀದಿಸಿದರೆ, ನೀವು ವಿತರಣಾ ಸಮಯದಲ್ಲಿ ನಿಮ್ಮ ಗುರುತಿನ ಚೀಟಿ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆನ್ಲೈನ್ ಪಾವತಿಯ ಜೊತೆಗೆ ಕ್ಯಾಶ್ ಆನ್ ಡೆಲಿವರಿ ಸೌಲಭ್ಯವು ಇದೆ

ಉಜ್ವಲ ಯೋಜನೆಯಡಿಯಲ್ಲಿ ಸಬ್ಸಿಡಿ ಸಹಿತರಿ ಫೀಲಿಂಗ್!

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಸಬ್ಸಿಡಿ ಸಹಿತ ಎಲ್ಪಿಜಿ ಮರುಪೂರ್ಣಗಳ ಸಂಖ್ಯೆಯನ್ನು ವರ್ಷಕ್ಕೆ 9 ರಿಂದ 4ಕ್ಕೆ ಇಳಿಸಲಾಗಿದೆ. ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕಾತೆ ರಾಜ್ಯ ಸಚಿವ ಸುರೇಶ್ ಗೋಪಿ, 2025 – 26ರ ಹಣಕಾಸು ವರ್ಷದಲ್ಲಿ ಪಿಎಂಯುವೈ ಗ್ರಾಹಕರ ಸರಾಸರಿ ಬಳಕೆ ವರ್ಷಕ್ಕೆ 4.71 ಸಿಲಿಂಡರ್ಗಳಷ್ಟಿತ್ತು ಎಂದು ಹೇಳಿದರು. ಈ ಮಾಹಿತಿಯ ಆಧಾರದ, ನಿಜವಾದ ಗ್ರಾಹಕರಿಗೆ ಬೆಂಬಲವನ್ನು ಕಾಯ್ದುಕೊಳ್ಳಲು ಮತ್ತು ಸಬ್ಸಿಡಿಯ ವೆಚ್ಚವನ್ನು ನಿಯಂತ್ರಣದಲ್ಲಿಡಲು ವರ್ಷಕ್ಕೆ ನಾಲ್ಕು ಸಬ್ಸಿಡಿ ಸಹಿತ ಮರುಪೂರ್ಣಗಳನ್ನು ಮುಂದುವರಿಸಲು ನಿರ್ಧರಿಸಲಾಗಿದೆ

HPCL, BPCL ಮತ್ತು ಇಂಡಿಯನ್ ಆಯಿಲ್ ಪ್ರತಿಂಗಳ ಆರಂಭದಲ್ಲಿ ಗೃಹಬಳಕೆಯ LPG ಸಿಲಿಂಡರ್ಬೆ ಗಳ ಬೆಲೆಗಳನ್ನು  ಪರಿಷ್ಕರಿಸುತ್ತದೆ. ಜುಲೈ 2026 ರಲ್ಲಿ 14.2 ಕೆಜಿ ಗೃಹ ಬಳಕೆಯ LPG ಸಿಲಿಂಡರ್ ಗಳ  ಬೆಲೆಗಳನ್ನು ಯಥಾ ಸ್ಥಿತಿಯಲ್ಲಿ ಇರಿಸಲಾಗಿದೆ. ಪ್ರಸ್ತುತ ಬೆಲೆಗಳು ಎಂದರೆ     ದೆಹಲಿ – ರೂ 942, ಕೊಲ್ಕತ್ತಾ – ರೂ 968, ಮುಂಬೈ – ರೂ 941, ಚೆನ್ನೈ – ರೂ 957, ಬೆಂಗಳೂರು – ರೂ 950,   14.2  ಕೆಜಿ ಗೃಹಬಳಕೆಯ ಸಿಲಿಂಡರ್ ಗಳ  ಬೆಲೆಗಳನ್ನು ಯಥಾ ಸ್ಥಿತಿಯಲ್ಲಿ ಇರಿಸಲಾಗಿದೆ

19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ!

ಗೃಹ ಬಳಕೆಯ ಎಲ್ಪಿಜಿಗೆ ಹೋಲಿಸಿದರೆ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಜುಲೈ 2026 ರಲ್ಲಿ ಇಳಿಸಲಾಗಿದೆ. ಮಾರ್ಚ್ ನಿಂದ ಜೂನ್ ವರೆಗೆ ಸತತ ಐದು ಬೆಲೆ ಏರಿಕೆಯ ನಂತರ ಬೆಲೆಯನ್ನು ಇಳಿಸಿರುವುದು ಇದೇ ಮೊದಲು

ಪ್ರಸ್ತುತ ಬೆಲೆ?

ದೆಹಲಿ – ರೂ 2,930 (ಹಿಂದಿನ ರೂ 3,113.50)

ಮುಂಬೈ  – ರೂ 2,885.50

ಕಲ್ಕತ್ತಾ – ರೂ 3,081.50 (ಹಿಂದಿನ ರೂ 3,225.50)

ಚೆನ್ನೈ  – ರೂ 3,106

ಬೆಂಗಳೂರು – ರೂ 3,021

ಪಾಟ್ನಾ – ರೂ 3,226.

ಈ ಸಿಲಿಂಡರ್ ಅನ್ನು ಮುಖ್ಯವಾಗಿ ರೆಸ್ಟೋರೆಂಟ್ಗಳು, ಹೋಟೆಲಗಳು, ಆಹಾರ ಅಂಗಡಿಗಳು, ಶಾಪಿಂಗ್ ಮಾಲ್ಗಳು, ಮತ್ತು ಸಣ್ಣ ಕೈಗಾರಿಕಾ ಸಂಸ್ಥೆಗಳಲ್ಲಿ ಬಳಸಲಾಗುತ್ತದೆ

PNG ತೆಗೆದುಕೊಂಡ 30 ದಿನಗಳ ಒಳಗೆ LPG ಸಂಪರ್ಕವನ್ನು ಹಸ್ತಾಂತರಿಸುವುದು ಕಡ್ಡಾಯವಾಗಿದೆ. ದ್ರವಿಕೃತ ಪೆಟ್ರೋಲಿಯಂ ಅನಿಲ (ಪೂರೈಕೆ ಮತ್ತು ವಿತರಣೆಯ ನಿಯಂತ್ರಣ) ತಿದ್ದುಪಡಿ ಆದೇಶ, 2026ರ ಪ್ರಕಾರ ಸರ್ಕಾರವು ಹೊಸ ನಿಯಮಗಳನ್ನು ಪರಿಚಯಿಸಿದೆ. ಈಗ ಗ್ರಾಹಕರು PNG ಸಂಪರ್ಕವನ್ನು ಪಡೆದರೆ, ಇಂಡಿಯನ್, ಭಾರತ್ ಗ್ಯಾಸ್ ಅಥವಾ HP ಗ್ಯಾಸ್ ನ LPG ಸಂಪರ್ಕವನ್ನು 30 ದಿನಗಳ ಒಳಗೆ ಮುಚ್ಚಬೇಕಾಗುತ್ತದೆ. ಆದಾಗ್ಯೂ, ಭವಿಷ್ಯದಲ್ಲಿ ಅವರು PNG ಸೇವೆ ಲಭ್ಯವಿಲ್ಲದ ಪ್ರದೇಶಕ್ಕೆ ಸ್ಥಳಾಂತರಗೊಂಡರೆ, ಹಿಂದಿನ LPG ಸಂಪರ್ಕವನ್ನು ಮತ್ತೆ ತೆರೆಯಬಹುದು. ಇದಕ್ಕಾಗಿ , LPG ಸಂಪರ್ಕವನ್ನು ಮುಚ್ಚುವಾಗ ವರ್ಗಾವಣೆ ವೋಚರನ್ನು ಸಂಗ್ರಹಿಸಬೇಕಾಗುತ್ತದೆ.

LPG ಬುಕ್ಕಿಂಗ್ ಮತ್ತು ವಿತರಣೆಗೆ ಹೊಸ ನಿಯಮಗಳು!

ಎಪಿಜಿಯನ್ನು ಆನ್ಲೈನ್ನಲ್ಲಿ ಬುಕ್ ಮಾಡುವ ಗ್ರಾಹಕರ ಮೇಲೆ ಸರ್ಕಾರ ಒತ್ತು ನೀಡಿದೆ. ವಿತರಕರ ಕಚೇರಿಯಲ್ಲಿ ಸರದಿಯಲ್ಲಿ ನಿಲ್ಲುವ ಬದಲು, ಈಗ ಡಿಜಿಟಲ್ ರೂಪದಲ್ಲಿ ಬುಕ್ ಮಾಡಲು ಸೂಚಿಸಲಾಗುತ್ತಿದೆ. ಇದಲ್ಲದೆ, ಸಿಲಿಂಡರ್ ವಿತರಣೆಯ ಸಮಯದಲ್ಲಿ ಗ್ರಾಹಕರ ಮೊಬೈಲ್ ಗೆ ವಿತರಣಾ ದೃಡೀಕರಣ ಕೋಡ್ (DAC) ಅಥವಾ OTP ಕಳಿಸಲಾಗುತ್ತದೆ. ವಿತರಣಾ ಕೆಲಸಗಾರರಿಗೆ OTP ನೀಡಿದ ನಂತರವೇ ಸಿಲಿಂಡರನ್ನು ಹಸ್ಥಾಂತರಿಸಲಾಗುತ್ತದೆ. OTP ಇಲ್ಲದಿದ್ದರೆ, ವಿತರಣೆ ಪೂರ್ಣಗೊಳ್ಳುವುದಿಲ್ಲ ಮತ್ತು ಸಿಲಿಂಡರನ್ನು ಹಿಂದಕ್ಕೆ ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ, ಎಪಿಜಿ ಮರುಪೂರ್ಣಕ್ಕಾಗಿ ಲಾಕಿನ್ ಅವಧಿ ಮೊದಲಿನಂತೆ ಇರುತ್ತದೆ. ನಗರ ಪ್ರದೇಶಗಳು – 25 ದಿನಗಳು, ಗ್ರಾಮೀಣ ಪ್ರದೇಶಗಳು – 45 ದಿನಗಳು.

ಈ ನಿಯಮಗಳನ್ನು ಅನುಸರಿಸಿದರೆ, ಎಲ್ಪಿಜಿ ಸೇವೆಗಳನ್ನು ಪಡೆಯುವಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಮತ್ತು ಹೊಸ ವ್ಯವಸ್ಥೆಯ ಪ್ರಯೋಜನಗಳು ಸಹ ಸುಲುಭವಾಗಿ ಲಭ್ಯವಿರುತ್ತವೆ.

WhatsApp Group Join Now
Telegram Group Join Now

Leave a Comment