ತಿದ್ದುಪಡಿ ಮಾಡಿದ ಯೋಜನಾ ವರದಿಯಲ್ಲಿ ಕರ್ನಾಟಕ ಸರ್ಕಾರ, ಕಾವೇರಿ ನೀರಿನ ಸಮಸ್ಯೆ ನದಿಗೆ ಅಡ್ಡಲಾಗಿ ಡೈವರ್ಷನ್ ವೀರ್ ನಿರ್ಮಿಸುವ ” ಶಿವನಸಮುದ್ರ ರನ್ – ಅಪ್ – ದಿ ರಿವರ್ ಪವರ್ ಪ್ರಾಜೆಕ್ಟ್’ ಎಂಬ ಹೊಸ ಅಂಶವನ್ನು ಸೇರಿಸಿತ್ತು
ಚೆನ್ನೈ: ವಿವಾದಾತ್ಮಕ ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಮತ್ತು ಕರ್ನಾಟಕದ ನಡುವಿನ ವಾಕ್ಸಮರದ ನಡುವೆಯೇ, ಕೇಂದ್ರ ಜಲ ಆಯೋಗ (CWC) ಕರ್ನಾಟಕ ಸರ್ಕಾರ ಸಲ್ಲಿಸಿದ್ದ ವಿಸ್ತೃತ ಯೋಜನಾ ವರದಿ (DPR) ಯನ್ನು ವಾಪಸ್ ಕಳುಹಿಸಿದೆ. ಯೋಜನಾ ಪ್ರಸ್ತಾವನೆ ಕಾವೇರಿ ನೀರಿನ ಸಮಸ್ಯೆ ಜಲ ವಿವಾದ ನ್ಯಾಯ ಮಂಡಳಿ (CWDT) ನೀಡಿರುವ ತೀರ್ಪು ಹಾಗೂ 2018ರ ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿಲ್ಲ ಎಂದು ಆಯೋಗ ಅಭಿಪ್ರಾಯ ಪಟ್ಟಿದೆ

ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಗೆ ಲಭ್ಯವಾಗಿರುವ ಅಧಿಕೃತ ದಾಖಲೆಗಳ ಪ್ರಕಾರ, ಕರ್ನಾಟಕವು ಬಳಕೆಗಾಗಿ ಸಂಗ್ರಹಿಸಬಹುದಾದ ನೀರಿನ ಪ್ರಮಾಣವನ್ನು 2.2 ಟಿಎಂಸಿ ಅಡಿ (TMCFT) ಹೆಚ್ಚಿಸುವ ಪ್ರಸ್ತಾಪ ಮಾಡಿದ್ದ ಹಿನ್ನೆಲೆಯಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡುವಂತೆ ಸೂಚಿಸಿ ಜೂನ್ 29ರಂದು ಸಿಡಬ್ಲ್ಯೂಸಿ ಬಿಪಿ ಆರನ್ನು ಹಿಂತಿರುಗಿಸಿದೆ
ಶಿವನಸಮುದ್ರ ಜಲವಿದ್ಯುತ್ ಯೋಜನೆ ಸೇರ್ಪಡೆ!
ತಿದ್ದುಪಡಿ ಮಾಡಿದ ಯೋಜನಾ ವರದಿಯಲ್ಲಿ ಕರ್ನಾಟಕ ಸರ್ಕಾರ, ಕಾವೇರಿ ನೀರಿನ ಸಮಸ್ಯೆ ನದಿಗೆ ಅಡ್ಡಲಾಗಿ ಡೈವರ್ಶನ್ ವೀರ್ ನಿರ್ಮಿಸುವ ‘ ಶಿವನಸಮುದ್ರ ರನ್ – ಅಪ್ – ದಿ ರಿವರ್ ಪವರ್ ಪ್ರಾಜೆಕ್ಟ್’ ಎಂಬ ವಸಂಶವನ್ನು ಸೇರಿಸಿತ್ತು ಈ ಕುರಿತು ಕರ್ನಾಟಕವು 2019ರಲ್ಲಿ ಸಲ್ಲಿಸಿದ್ದ ಮೂಲ ಡಿಪಿಆರ್ ಗೆ ಸಂಬಂಧಿಸಿದಂತೆ ಸಿಡಬ್ಲ್ಯೂಸಿ ಎತ್ತಿದ್ದ ಪ್ರಶ್ನೆಗಳಿಗೆ, 2026 ಏಪ್ರಿಲ್ 21ರಂದು ಸಲ್ಲಿಸಿದ್ದ ಅನುಸರಣೆ ವರದಿಯನ್ನು ಪರಿಶೀಲಿಸಿದ ಬಳಿಕ ಆಯೋಗ ಈ ಆಕ್ಷೇಪಣೆಗಳನ್ನು ದಾಖಲಿಸಿದೆ
ಕುಡಿಯುವ ನೀರಿನ ಬಳಕೆ ಹೆಚ್ಚಿಸಿದ ಪ್ರಸ್ತಾವನೆ?
2018ರಲ್ಲಿ ಮೇಕೆದಾಟು ಯೋಜನೆಯನ್ನು ಮೊದಲು ಪ್ರಸ್ತಾಪಿಸಿದ್ದಾಗ, ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ 4.75 ಟಿಎಂಸಿ ಅಡಿ ಹೆಚ್ಚುವರಿ ಬಳಕೆಗೆ ಅವಕಾಶ ಕಲ್ಪಿಸುವ ಸಮತೋಲನ ಜಲಾಶಯ ಎಂದು ವಿವರಿಸಲಾಗಿತ್ತು. ಇದನ್ನು ಆದರಿಸಿ 2018ರ ನವಂಬರ್ ನಲ್ಲಿ ಸಿಡಬ್ಲ್ಯೂಸಿ ಡಿಪಿಆರ್ ಸಿದ್ಧಿಪಡಿಸಲು ತಾತ್ವಿಕ ಅನುಮೋದನೆ ನೀಡತ್ತು. ಆದರೆ ಈ ವರ್ಷದ ಏಪ್ರಿಲ್ ನಲ್ಲಿ ಸಲ್ಲಿಸಿದ ಪರಿಷ್ಕೃತ ಪ್ರಸ್ತಾವನೆಯಲ್ಲಿ ಕರ್ನಾಟಕ ಸರ್ಕಾರ, ಶಿವನಸಮುದ್ರ ಜಲ ವಿದ್ಯುತ್ ಯೋಜನೆಯನ್ನು ಸೇರಿಸುವುದರ ಜೊತೆಗೆ ಹೆಚ್ಚುವರಿ ಬಳಕೆಯ ನೀರಿನ ಪ್ರಮಾಣವನ್ನು 4.75 ಟಿಎಂಸಿಯಿಂದ 6.95 ಟಿಎಂಸಿಗೆ ಹೆಚ್ಚಿಸಲು ಪ್ರಸ್ತಾಪಿಸಿತ್ತು
59.46 ಟಿಎಂಸಿ ಸಂಗ್ರಹ ಸಾಮರ್ಥ್ಯದ ಪ್ರಶ್ನೆ!
ಈ ಬದಲಾವಣೆಗಳು 2019ರ ಮೂಲ ಬಿಪಿಆರ್ನಲ್ಲಿ
ಇರಲಿಲ್ಲ ಎಂದು ಸಿ ಡಬ್ಲ್ಯೂ ಸಿ ಗಮನಿಸಿತ್ತು. 59.46 ಟಿಎಂಸಿ ಜೀವಂತ ಸಂಗ್ರಹ ಸಮರ್ಥ್ಯದ (live storage) ಜಲಾಶಯ ನಿರ್ಮಾಣಕ್ಕೆ ಕರ್ನಾಟಕ ನೀಡುವ ಸಮರ್ಥನೆಯನ್ನು ಪ್ರಶ್ನಿಸಿದೆ
ಕರ್ನಾಟಕದ ಪ್ರಕಾರ?
• ಜೂನ್ ಮತ್ತು ಜುಲೈನಲ್ಲಿ ತಮಿಳುನಾಡಿಗೆ ನೀರು ಬಿಡಲು – 13 ಟಿಎಂಸಿ
• ಫೆಬ್ರವರ ಇಂದ ಮೇವರೆಗೆ ಪರಿಸರ ಹರಿವು ಕಾಯ್ದುಕೊಳ್ಳಲು – 10 ಟಿಎಂಸಿ
• 2044 ರ ವೇಳೆಗೆ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಕ್ಕಾಗಿ – 33.15 ಟಿಎಂಸಿ
• ಆವಿಯಾಗುವಿಕೆ ಮತ್ತು ಹೂಳು ಸಂಗ್ರಾಮಕ್ಕೆ – 3.85 ಟಿಎಂಸಿ
ಒಟ್ಟು ಸುಮಾರು 60 ಟಿಎಂಸಿ ಸಂಗ್ರಹ ಸಮರ್ಥ್ಯ ಅಗತ್ಯ ಎಂದು ರಾಜ್ಯ ವಾದಿಸಿತ್ತು
ಹಳೆಯ ಅಂಕಿ – ಅಂಶಗಳ ಆಧಾರ: ಡಬ್ಲ್ಯೂ ಸಿ ಆಕ್ಷೇಪ
ಆದರೆ, ಈ ಲೆಕ್ಕಾಚಾರದಲ್ಲಿ ಗಂಭೀರ ದೋಷಗಳಿವೆ ಎಂದು ಸಿ ಡಬ್ಲ್ಯೂ ಹೇಳಿದೆ. 2044 ರ ವೇಳೆಗೆ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯವನ್ನು 64 ಟಿಎಂಸಿ ಎಂದು ಅಂದಾಜಿಸಿರುವ ಕರ್ನಾಟಕ, ಅದರಲ್ಲಿ 14.52 ಟಿಎಂಸಿಯನ್ನು ಈಗಿನ ನೀರು ಪೂರೈಕೆ ಎಂದು ಕಡಿತಗೊಳಿಸಿದೆ. ಆದರೆ ಈ 14.52 ಟಿಎಂಸಿ ಅಂಕಿ 1990ರದ್ದು ಎಂದು ಸಿ ಡಬ್ಲ್ಯೂ ಸಿ ಸೂಚಿಸಿದೆ
ಇದಲ್ಲದೆ, 2018ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಕರ್ನಾಟಕದ ಒಟ್ಟು ಕುಡಿಯುವ ಹಾಗೂ ಗೃಹ ಬಳಕೆಯ ನೀರಿನ ಅಗತ್ಯವನ್ನು 33 ಟಿಎಂಸಿ ಎಂದು ಹಾಗೂ ಅದರಲ್ಲಿ ಬೆಂಗಳೂರಿಗೆ ಮಾತ್ರ 24 ಟಿಎಂಸಿ ಸಾಕು ಎಂದು ಈಗಾಗಲೇ ನಿರ್ಧರಿಸಲಾಗಿದೆ ಎಂದು ಆಯೋಗ ಉಲ್ಲೇಖಸಿದೆ
ಕಳೆದ ಮೂರು ದಶಕಗಳಲ್ಲಿ ಬೆಂಗಳೂರು ಬಹಳಷ್ಟು ವಿಸ್ತರಿಸಿದ್ದರೂ, ಪ್ರಸ್ತುತ ನಗರ ಎಷ್ಟು ನೀರನ್ನು ಬಳಸುತ್ತಿದೆ ಎಂಬ ಮಾಹಿತಿ ಕರ್ನಾಟಕ ನೀಡಿಲ್ಲ ಎಂದು ಸಿಡಬ್ಲ್ಯೂಸಿ ಹೇಳಿದೆ
ಹೀಗಾಗಿ, ಹಳೆಯ ಅಂಕಿ ಅಂಶಗಳ ಆಧಾರದ ಮೇಲೆ 59.46 ಟಿಎಂಸಿ ಜಲಾಶಯದ ಸಾಮರ್ಥ್ಯ ನಿಗದಿಪಡಿಸಿರುವುದು ಸೂಕ್ತವಾಗಿ ಕಾಣುವುದಿಲ್ಲ ಎಂದು ಆಯೋಗ ಅಭಿಪ್ರಾಯ ಪಟ್ಟಿದೆ
6.95 ಟಿಎಂಸಿ ಬಳಕೆಗೂ ವಿರೋಧ!
ಕರ್ನಾಟಕವು ಹೆಚ್ಚುವರಿ 6.95 ಟಿಎಂಸಿ ನೀರಿನ ಬಳಕೆಗೆ ಅನುಮತಿ ಕೋರಿರುವುದಕ್ಕೂ ಸಿಡಬ್ಲ್ಯೂಸಿ ಅಕ್ಷೇಪಾ ವ್ಯಕ್ತ ಪಡಿಸಿದೆ. ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ 6.5 ಟಿಎಂಸಿ ಹೆಚ್ಚುವರಿ ಕುಡಿಯುವ ನೀರಿನ ಬಳಕೆಗೆ ಅವಕಾಶ ನೀಡಿತ್ತು. ಆದರೆ, 6.5 ಟಿಎಂಸಿಯಲ್ಲಿ ರಾಜ್ಯದ ಈಗಿನ ಬಳಕೆಯು ಸೇರಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ
ಹೊಸ ಡಿಪಿರ್ ಸಲ್ಲಿಸಲು ಸೂಚನೆ!
ಈ ಎಲ್ಲಾ ಅಕ್ಷೇಪಾಣೆಗಳ ಹಿನ್ನೆಲೆಯಲ್ಲಿ, 2019ರ ಡಿಪಿಆರ್ ಅನ್ನು ಅಧಿಕೃತವಾಗಿ ವಾಪಸ್ ಕಳುಹಿಸಿರುವ ಸಿಡಬ್ಲ್ಯೂಸಿ, ಕಾವೇರಿ ನೀರಿನ ಸಮಸ್ಯೆ ನ್ಯಾಯಮಂಡಳಿ ತೀರ್ಪು, ಸುಪ್ರೀಂ ಕೋರ್ಟ್ ಆದೇಶ ಹಾಗೂ ಸಿಡಬ್ಲ್ಯೂಸಿ ಮಾರ್ಗಸೂಚಿಗಳಿಗೆ ಅನುಗುಣವಾಗಿ ಹೊಸ ಡಿಪಿಆರ್ ಸಿದ್ಧಿಪಡಿಸಿ ಸಲ್ಲಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ
ಹೊಸ ಪ್ರಸ್ತಾವನೆಯಲ್ಲಿ ನವೀಕೃತ ತಾಂತ್ರಿಕ ವಿವರಗಳು, ಹೊಸ ಅಂಕಿ – ಅಂಶಗಳು ಹಾಗೂ ಪರಿಷ್ಕೃತ ನಕ್ಷೆಗಳು ಇರಬೇಕು ಎಂದು ಆಯೋಗ ತಿಳಿಸಿದೆ
ತಮಿಳುನಾಡಿನ ವಾದಕ್ಕೆ ಎಡಬ್ಲ್ಯೂಸಿ ಬೆಂಬಲ
ತಮಿಳುನಾಡು ಜಲ ಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸಿಡಬ್ಲ್ಯೂಸಿಯ ಅಕ್ಷೇಪಾಣೆಗಳು ಮೇಕೆದಾಟು ಯೋಜನೆ ಕುರಿತು ರಾಜ್ಯ ಸರ್ಕಾರ ಆರಂಭದಿಂದಲೇ ವ್ಯಕ್ತಪಡಿಸಿದ್ದ ಆತಂಕವನ್ನು ಸ್ವತಂತ್ರವಾಗಿ ಸಮರ್ಥಿಸಿವೆ ಎಂದು ಹೇಳಿದ್ದಾರೆ
“ಕೃಷ್ಣರಾಜಸಾಗರ ಮತ್ತು ಕಬಿನ ಜಲಾಶಯಗಳ ಕೆಳಭಾಗದಲ್ಲಿ ಉಂಟಾಗುವ ಸುಮಾರು 80 ಟಿಎಂಸಿ ಹರಿವಿನ ನೀರನ್ನು ತಡೆಹಿಡಿಯುವ ಪ್ರಯತ್ನವೇ ಮೀಕೆ ದಾಟು ಯೋಜನೆ. ಇದು ತಮಿಳುನಾಡು ಪಾಲಿನ ನೀರಿನ ಮೇಲೆ ಪರಿಣಾಮ ಬೀರುತ್ತದೆ. ಕುಡಿಯುವ ನೀರಿನ ನೆಪದಲ್ಲಿ ಮೇಲ್ಭಾಗದಲ್ಲಿ ಹೆಚ್ಚುವರಿ ಸಂಗ್ರಹ ಸಾಮರ್ಥ್ಯ ಸುಟ್ಟಿಸುವ ಉದ್ದೇಶ ಇದಾಗಿದೆ ಎಂದು ನಾವು ಆರಂಭದಿಂದಲೇ ಹೇಳುತ್ತಿದ್ದೇವೆ”, ಎಂದು ಅವರು ತಿಳಿಸಿದ್ದಾರೆ
ವಿಜಯ್ ಹೆಲಿಕಾಪ್ಟರ್ ಆಹ್ವಾನ ನಿರಾಕರಣೆ!
ಇದೆ ವೇಳೆ, ಕಾವೇರಿ ಜಲನಯನ ಪ್ರದೇಶವನ್ನು ಹೆಲಿಕಾಪ್ಟರ್ ಮೂಲಕ ವೀಕ್ಷಿಸುವಂತೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದ ಆಹ್ವಾನವನ್ನು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ
ಆದಾಗ್ಯೂ, ಆಗಸ್ಟ್ 3 ರಂದು ಬೆಂಗಳೂರಿನ ವಿಧಾನ ಸೌಧದಲ್ಲಿರುವ ಮುಖ್ಯಮಂತ್ರಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಕಾವೇರಿ ನೀರು ಬಿಡುಗಡೆ ಕುರಿತು ಚರ್ಚೆ ನಡೆಸಿದ ಬಳಿಕ, ಅದೇ ದಿನ ಚೆನ್ನೈಗೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ. ನೀವ್ ಹೇಳಿ ಮುಖ್ಯ ಕಾರ್ಯದರ್ಶಿ ಎಂ. ಸಾಯಿ ಕುಮಾರ್ ಅವರು ವಿಜಯ ಅವರೊಂದಿಗೆ ಇರಲಿದ್ದಾರೆ
Digital Kannada ತನ್ನ ಓದುಗರಿಗೆ ನಿಖರವಾದ ಮಾಹಿತಿಯನ್ನು ಮತ್ತು ಸರಿಯಾದ ಮಾಹಿತಿಯನ್ನು ನೀಡುತ್ತದೆ ಮತ್ತು ಯಾವುದೇ ಅನಧಿಕೃತ ಮಾಹಿತಿ ಮತ್ತು ಸುಳ್ಳು ಮಾಹಿತಿಯನ್ನು ನೀಡುವುದಿಲ್ಲ