Telegram Join My Telegram   WhatsApp Join My WhatsApp

ಅಣಬೆ ಕೃಷಿ ಸಂಪೂರ್ಣ ಮಾಹಿತಿ 2026 |Mushroom Farming Guide in kannada

ಅಣಬೆ ಕೃಷಿ ಸಂಪೂರ್ಣ ಮಾಹಿತಿ 

ಅಣಬೆ ಕೃಷಿ ಇಂದಿನ ದಿನಗಳಲ್ಲಿ ಅತ್ಯಂತ ಲಾಭದಾಯಕ ಮತ್ತು ಕಡಿಮೆ ವೆಚ್ಚದಲ್ಲಿ ಆರಂಭಿಸಬಹುದಾದ ಕೃಷಿ ವಿದ್ಯಾಮಗಳಲ್ಲಿ ಒಂದಾಗಿದೆ. ಕಡಿಮೆ ಜಾಗ ಕಡಿಮೆ ನೀರು ಮತ್ತು ಕಡಿಮೆ ಬಂಡವಾಳದಲ್ಲಿ ಉತ್ತಮ ಆದಾಯ ಗಳಿಸುವ ಅವಕಾಶವನ್ನು ಅಣಬೆ ಕೃಷಿ ಒದಗಿಸುತ್ತದೆ. ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಅಣಬೆಗಳಿಗೆ ಮಾರುಕಟ್ಟೆಯಲ್ಲಿ ವರ್ಷಪೂರ್ತಿ ಉತ್ತಮ ಬೇಡಿಕೆ ಇದೆ. ಇದರಿಂದ ರೈತರು ಮಹಿಳಾ   ಸ್ವಸಹಾಯ  ಸಂಘಗಳು ಯುವ ಉದ್ಯಮಿಗಳು ಹಾಗೂ ಗೃಹಧಾರಿತ ಉದ್ಯಮ ಆರಂಭಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಅಣಬೆ ಕೃಷಿ ಸಂಪೂರ್ಣ ಮಾಹಿತಿ 

ಅಣಬೆಯಲ್ಲಿ ಪ್ರೋಟೀನ್,ವಿಟಮಿನ್ ಬಿ, ವಿಟಮಿನ್ ಬಿ, ಪೊಟ್ಯಾಶಿಯಂ ಕಬ್ಬಿಣ ಫೈಬರ್ ಹಾಗೂ ವಿವಿಧ ಅಂಶಗಳು ಸಮೃದ್ಧವಾಗಿವೆ. ಹಣವೆಗಳಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ ಇರುವುದರಿಂದ ಆರೋಗ್ಯಕರ ಆಹಾರವೆಂದರೆ ಪರಿಗಣಿಸಲಾಗುತ್ತದೆ ಸಸ್ಯಹಾರಿಗಳಿಗೆ ಇದು ಉತ್ತಮ ಪ್ರೊಟೀನ್ ಮೂಲವಾಗಿದೆ.

ಭಾರತದಲ್ಲಿ ಮುಖ್ಯವಾಗಿ ಬೆಳೆಯುವ ಅಣಬೆಯ ಎಂದರೆ ಬಟನ್ ಅಣಬೆ, ಸಿಪ್ಪೆ ಅಣಬೆ, ಮಿಲ್ಕಿ ಅಣಬೆ ಮತ್ತು ಪ್ಯಾಟಿಸ್ಟ್ರಾ ಅಣಬೆ ಕರ್ನಾಟಕದಲ್ಲಿ  ಆಯಿಸ್ಟರ್ ಮತ್ತು ಮಿಲ್ಕಿ ಅಣಬೆಗಳ ಕೃಷಿ ಹೆಚ್ಚು ಜನಪ್ರಿಯವಾಗಿದೆ ಇವುಗಳನ್ನು ಸ್ಥಳೀಯ ಹವಮಾನದಲ್ಲಿ ಸುಲಭವಾಗಿ ಬೆಳೆಯಬಹುದು.

ಅಣಬೆ ಕೃಷಿಯು ಕಡಿಮೆ ಜಾಗ, ಕಡಿಮೆ ನೀರು ಮತ್ತು ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಉತ್ತಮ ಕೃಷಿ ಉದ್ಯಮವಾಗಿದೆ. ಸರಿಯಾದ ತರಬೇತಿ ಮತ್ತು ಸ್ವಚ್ಛತೆ ಪಾಲಿಸಿದರೆ ವರ್ಷ ಪೂರ್ತಿ ಉತ್ತಮ ಆದಾಯ ಗಳಿಸಬಹುದು.

ಅಣಬೆ ಕೃಷಿ ಸಂಪೂರ್ಣ ಮಾಹಿತಿ 2026 

ಅಣಬೆ ಕೃಷಿ ಸಂಪೂರ್ಣ ಮಾಹಿತಿ
ಅಣಬೆ ಕೃಷಿ ಸಂಪೂರ್ಣ ಮಾಹಿತಿ

1. ಪ್ರಮುಖ ಅಣಬೆ ತಳಿಗಳು

• ಸಿಪ್ಪೆ ಅಣಬೆ (Oyster Mushroom)

•ಮಿಲ್ಕಿ ಅಣಬೆ ( Milky mushroom)

•ಬಟನ್ ಅಣಬೆ ( Button mushroom)

– ಸಿಪ್ಪೆ ಅಣಬೆಯು: ಆರಂಭಿಕರಿಗೆ ಅತ್ಯುತ್ತಮ.

– ಮಿಲ್ಕಿ ಅಣಬೆ : ಕರ್ನಾಟಕದಲ್ಲಿ ಬೇಸಿಗೆಯಲ್ಲಿ ಬೆಳೆಯಬಹುದು.

ಬಟನ್ ಅಣಬೆ: ಹೆಚ್ಚಿನ ಬೇಡಿಕೆ ಅದರ ನಿಯಂತ್ರಿತ ತಾಪಮಾನ ಅಗತ್ಯ.

2. ಬೆಳೆಯಲು ಬೇಕಾದ ಪರಿಸರ

* ಹಣಬೆ                  ತಾಪಮಾನ            ಆದ್ರತೆ

* ಸಿಪ್ಪೆ                     20-30°C             80-9೦%

* ಮಿಲ್ಕಿ                   25-35°C               80-90%

* ಬಟನ್                 14-18°C              85- 90%

ಸರಿಯಾದ ತಾಪಮಾನ

ಆದ್ಯತೆ ಮತ್ತು ಸ್ವಚ್ಛತೆ ಯಶಸ್ವಿನ ಮೂಲಕ.

3. ಬೇಕಾಗುವ ಸಾಮಗ್ರಿಗಳು

ಹಣವೇ ಸ್ಪಾನ್ (ಬೀಜ)

ಒಣ ಬತ್ತದ ಹುಲ್ಲು ಅಥವಾ ಗೋಧಿ ಹುಲ್ಲು

ಪ್ಲಾಸ್ಟಿಕ್ ಗ್ರೋ  ಬ್ಯಾಗ್ ರಾಕ್ ಗಳು

  • ನೀರಿನ ಸ್ಪ್ರೇ

ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸುವ ಯೋಜನೆ

ತಾಪಮಾನ ಮತ್ತು ಆದ್ಯತೆ ಅಳೆಯುವ ಸಾಧನ

4. ಬೆಳೆಯುವ ವಿಧಾನ

ಒಣ ಹುಲ್ಲನ್ನು 6-8 ಗಂಟೆ ನೆನಸಿಡಿ.

1 ಗಂಟೆ ಬಿಸಿನೀರಲ್ಲಿ ಅಥವಾ ಅವೆಯಲ್ಲಿ ಶುದ್ಧೀಕರಿಸಿ.

ತಂಪಾದ ನಂತರ ಬ್ಯಾಗ್ ನಲ್ಲಿ ಹುಲ್ಲು ಮತ್ತು ಸ್ಪಾನ್ ಅನ್ನು ಪದರ ಪದರವಾಗಿ ತುಂಬಿ.

ಬ್ಯಾಗಿಗೆ ಸಣ್ಣ ರಂದ್ರ ಮಾಡಿ.

15 ಮತ್ತು 20 ದಿನ ಕತ್ತಲೆ ಕೋಣೆಯಲ್ಲಿ ಇಡಿ.

ನಂತರ ಬೆಳಕು ಮತ್ತು ಗಾಳಿ ಇರುವ ಕೋಣೆಗೆ ಸ್ಥಳಾಂತರಿಸಿ.

ದಿನಕ್ಕೆ 2- 3 ಬಾರಿ ನೀರಿನ ಮಂಜು ಸಿಂಬಡಿಸಿ.

5. ಕೊಯ್ಲು

20-30 ದಿನಗಳಲ್ಲಿ ಮೊದಲ ಕೊಯ್ಲು.

45-60 ದಿನಗಳಲ್ಲಿ 3-4 ಕೊಯ್ಲುಗಳ ಸಾಧ್ಯ .

ಒಂದು ಬ್ಯಾಗ್ ನಿಂದ ಸುಮಾರು   0.8-1.5 ಕೆಜಿ   ಅಣಬೆ ದೊರೆಯಬಹುದು.

ಹೆಚ್ಚಿನ ಮಾಹಿತಿ ತಿಳಿಯಿರಿ             instagram

6. ಹೂಡಿಕೆ:

ಸುಮಾರು 100 ಬ್ಯಾಗ್ ಗಳಿಗೆ

ಸ್ಪಾನ್ (ಬೀಜ)                             ₹ 3,000 –  5,000

ಹುಲ್ಲು ಮತ್ತು ಬ್ಯಾಗ್.                  ₹ 2,000 – 4,000

ರಾಕ್ ಮತ್ತು ಕೊಠಡಿ.                  ₹ 15,000 – 50,000

ಇತರೆ ವೆಚ್ಚ

( ನೀರಿನ ಸ್ಪ್ರೇ, ಆರ್ದತೆ ಸಾಧನ ಇತ್ಯಾದಿ)  ₹ 5,000 – 10,000

ಒಟ್ಟು ಸುಮಾರು ₹25,000 – ₹70,000 ಆಗುತ್ತದೆ.

ಅಣಬೆ ಕೃಷಿಯ ಲಾಭಗಳು:

ಕಡಿಮೆ ಹೂಡಿಕೆ

ಕಡಿಮೆ ನೀರು

ವರ್ಷಪೂರ್ತಿ ಆದಾಯ

ಹೆಚ್ಚಿನ ಲಾಭ

ಹೆಚ್ಚಿನ ಬೇಡಿಕೆ

7. ಆದಾಯ:

100 ಬ್ಯಾಕ್ ಗಳಿಂದ ಸುಮಾರು80-150  ಕೆಜಿ ಅಣಬೆ.

ಮಾರಾಟ ಬೆಲ : ₹200 – ₹300/ ಕೆಜಿ ( ತಳಿ ಮತ್ತು ಸ್ಥಳಕ್ಕೆ ಅನುಗುಣವಾಗಿ).

ಉತ್ತಮ ನಿರ್ವಹಣೆಯಲ್ಲಿ ಉತ್ತಮ ಲಾಭಗಳಿಸುವುದು.

ಅಣಬೆ ಕೃಷಿ ಸಂಪೂರ್ಣ ಮಾಹಿತಿ ಇಂದೇ ಅಣಬೆ ಬೆಳೆ  ಬೆಳೆಯಲು ಶುರು ಮಾಡಿ 

8. ಮಾರಾಟದ ಅವಕಾಶಗಳು

ಸ್ಥಳೀಯ ತರಕಾರಿ ಅಂಗಡಿಗಳು

ಸೂಪರ್ ಮಾರ್ಕೆಟ್

ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು

ಆನ್ಲೈನ್ ಡೆಲಿವರಿ

ನೇರ ಗ್ರಾಹಕರಿಗೆ

ಒಣ ಹಣಬೆ ಮತ್ತು ಅಣಬೆ ಪುಡಿ ತಯಾರಿಸಿ ಹೆಚ್ಚುವರಿ ಮೌಲ್ಯ ಪಡೆಯಬಹುದು.

ಯಶಸ್ಸಿನ ಸಲಹೆಗಳು:

ಗುಣಮಟ್ಟದ ಸ್ಪಾನ್ ಮಾತ್ರ ಬಳಸಿ

ಕೊಠಡಿಯನ್ನು ಯಾವಾಗಲೂ ಸ್ವಚ್ಛವಾಗಿಡಿ

ಸರಿಯಾದ ತಾಪಮಾನ ಮತ್ತು ಆದ್ರತೆ ಕಾಪಾಡಿ

ಕೇಟ ಮತ್ತು ಶಿಲೀಂದ್ರ ಸೋಂಕು  ಕಂಡ ತಕ್ಷಣ ಬ್ಯಾಗ್ ಗಳನ್ನು ಬೇರ್ಪಡಿಸಿ

ಸರಿಯಾದ ತಾಪಮಾನ, ಸರಿಯಾದ ಆದ್ರತೆ  ಸ್ವಚ್ಛತೆ ಕಾಪಾಡಿ ,ಸೋಂಕಿತ ಬ್ಯಾಗ್ ಬೇರ್ಪಡಿಸಿ. 

ಸಲಹೆ ಹಾಗೂ ಸಂಪೂರ್ಣ ಮಾಹಿತಿ 

ಕಡಿಮೆ ಹೂಡಿಕೆಯ ಮಾಡಿ ಹೆಚ್ಚಿನ ಲಾಭ ಪಡೆಯಿರಿ

ಒಟ್ಟಾರೆ, ಅಣಬೆ ಕೃಷಿಯು ಕಡಿಮೆ ವೆಚ್ಚದಲ್ಲಿ ನೆತ್ತಿನ ಲಾಭ ನೀಡುವ,  ಪರಿಸರಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಯಾಗಿದೆ. ಸರಿಯಾದ ತಂತ್ರಜ್ಞಾನ, ಗುಣಮಟ್ಟದ ಬೀಜ, ಸ್ವಚ್ಛತೆ ಮತ್ತು ಉತ್ತಮ ನಿರ್ವಹಣೆಯೊಂದಿಗೆ ಹಣಬೆ ಕೃಷಿ ನಡೆಸಿದರೆ ಉತ್ತಮ ಇಳುವರಿ ಹಾಗೂ ಉತ್ತಮ ಆದಾಯವನ್ನು ಗಳಿಸಬಹುದು,  ಆದ್ದರಿಂದ ಭವಿಷ್ಯದಲ್ಲಿ ಹಣವಿ ಕೃಷಿ ಮಹತ್ವ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

WhatsApp Group Join Now
Telegram Group Join Now

1 thought on “ಅಣಬೆ ಕೃಷಿ ಸಂಪೂರ್ಣ ಮಾಹಿತಿ 2026 |Mushroom Farming Guide in kannada”

Leave a Comment