ಶ್ರೀ ರಾಮ್ ಪೈನಾನ್ಸ್ ವಿದ್ಯಾರ್ಥಿವೇತನ ಯೋಜನೆ
ಶ್ರೀ ರಾಮ್ ಪೈನಾನ್ಸ್ ಪ್ರಮುಖವಾಗಿ ಇಂದಿನ ದಿನಗಳಲ್ಲಿ ಶಿಕ್ಷಣದ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಮಕ್ಕಳ ಶಿಕ್ಷಣವನ್ನು ಮುಂದುವರಿಸಲು ಒಂದು ದೊಡ್ಡ ಸವಾಲಾಗಿದೆ ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಹಲವು ಖಾಸಗಿ ಸಂಸ್ಥೆಗಳು ಹಾಗೂ ಕಂಪನಿಗಳು ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ (scholarship) ಯೋಜನೆಗಳನ್ನು ಜಾರಿಗೆ ತರುತ್ತಿವೆ ಅಂತಹ ಯೋಜನೆಗಳಲ್ಲಿ ಒಂದಾದ ಸಂಸ್ಥೆಯೇ ಶ್ರೀ ರಾಮ ಪೈನಾನ್ಸ್
ಯೋಜನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಹಣಕಾಸಿನ ನೆರವು ನೀಡಲಾಗುತ್ತಿದೆ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನದಿಂದ ಶಿಕ್ಷಣದ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವ ಅವಕಾಶ ದೊರೆಯುತ್ತದೆ
ಶ್ರೀ ರಾಮ್ ಪೈನಾನ್ಸ್ ವಿದ್ಯಾರ್ಥಿವೇತನ ಎಂದರೇನು?
ಶ್ರೀ ರಾಮ್ ಪೈನಾನ್ಸ್ ಲಿಮಿಟೆಡ್ ತನ್ನ ಸಾಮಾಜಿಕ ಹೊಣೆಗಾರಿಕೆ (CSR) ಕಾರ್ಯಕ್ರಮದಡಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದೆ.ಈ ಯೋಜನೆಯ ಮುಖ್ಯ ಉದ್ದೇಶ ಆರ್ಥಿಕ ತೊಂದರೆಯಿಂದ ಶಿಕ್ಷಣ ನಿಲ್ಲಿಸಬೇಕಾದ ಪರಿಸ್ಥಿತಿ ಎದರಿಸುತ್ತಿರುವ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ನೆರವಾಗುವುದಾಗಿದೆ
ಯಾರು ಅರ್ಜಿ ಸಲ್ಲಿಸಬಹುದು?
ಈ ವಿದ್ಯಾರ್ಥಿವೇತನಕ್ಕೆ ಕೆಳಗಿನ ವಿಧ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
- 8ನೇ ತರಗತಿ ವಿದ್ಯಾರ್ಥಿಗಳು
- 9ನೇ ತರಗತಿ ವಿದ್ಯಾರ್ಥಿಗಳು
- 10 ನೇ ತರಗತಿ ವಿದ್ಯಾರ್ಥಿಗಳು
- ಪದವಿ ಮೊದಲನೇ ವರ್ಷದ ವಿಧ್ಯಾರ್ಥಿಗಳು
- ಪದವಿ ಎರಡನೇ ವರ್ಷದ ವಿಧ್ಯಾರ್ಥಿಗಳು
ವಿಧ್ಯಾರ್ಥಿಯ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ
ವಿದ್ಯಾರ್ಥಿವೇತನ Motta
8,9,10ತರಗತಿ ವಿದ್ಯಾರ್ಥಿಗಳಿಗೆ -4000
ಪದವಿ ಮೊದಲನೇ ಮತ್ತು ಎರಡನೇ ವರ್ಷದ ವಿಧ್ಯಾರ್ಥಿಗಳಿಗೆ-4500
ಆಯ್ಕೆಯಾದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಈ ಮೊತ್ತ ಜಮೆಯಾಗುತ್ತದೆ
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು?
ಅರ್ಜಿ ಸಲ್ಲಿಸಲು ವಿಧ್ಯಾರ್ಥಿಗಳು ಸಾಮಾನ್ಯವಾಗಿ ಈ ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು
- ಆಧಾರ್ ಕಾರ್ಡ್
- ಶಾಲಾ ಅಥವಾ ಕಾಲೇಜಿನ ಗುರುತಿನ ಚೀಟಿ
- ಇತ್ತೀಚಿನ ಅಂಕಪಟ್ಟಿ
- ಬ್ಯಾಂಕ್ ಪಾಸ್ ಬುಕ್
- ಬ್ಯಾಂಕ್ ಖಾತೆಯ IFSC ವಿವರ
- ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ
- ಮೊಬೈಲ್ ಸಂಖ್ಯೆ
- ಆದಾಯ ಪ್ರಮಾಣ ಪತ್ರ
- ವಿಳಾಸದ ದಾಖಲೆ
- ಆನ್ಲೈನ್ ಅಂಕಪಟ್ಟಿ
ವಾಹನ ಚಾಲಕರ ಮಕ್ಕಳಿಗೆ ವಿಶೇಷ ಅವಕಾಶ
ಈ ಯೋಜನೆಯಲ್ಲಿ ಕೆಲವು ವಿಶೇಷ ವರ್ಗಗಳಿಗೂ ಆಧ್ಯತೆ ನೀಡಲಾಗುತ್ತದೆ ವಿಶೇಷವಾಗಿ
ಟ್ರಕ್ ಚಾಲಕರು
ಟ್ಯಾಕ್ಸಿ ಚಾಲಕರು
ಆಟೋ ಚಾಲಕರು
ಲಾರಿ ಚಾಲಕರು
ವಾಣಿಜ್ಯ ವಾಹನ ಚಾಲಕರ ಮಕ್ಕಳು
ಅರ್ಜಿ ಸಸಲ್ಲಿಸುವ ಸಂಧರ್ಭದಲ್ಲಿ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ವಾಹನದ RC Book ಹಾಗೂ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕಾಗಬಹುದು

ವಿದ್ಯಾರ್ಥಿವೇತನದ ಪ್ರಯೋಜನಗಳು
ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಹಲವು ರೀತಿಯ ಲಾಭಗಳಿವೆ.
ಶಿಕ್ಷಣದ ವೆಚ್ಚ ಕಡಿಮೆಯಾಗುತ್ತದೆ.
ಪುಸ್ತಕಗಳು ಹಾಗೂ ಅಧ್ಯಯನ ಸಾಮಗ್ರಿಗಳನ್ನು ಖರೀದಿಸಲು ನೆರವಾಗುತ್ತದೆ.
ಪರೀಕ್ಷಾ ಶುಲ್ಕ ಪಾವತಿಸಲು ಸಹಾಯವಾಗುತ್ತದೆ.
ಆರ್ಥಿಕ ತೊಂದರೆಯಿಂದ ಶಿಕ್ಷಣ ನಿಲ್ಲಿಸುವ ಪರಿಸ್ಥಿತಿ ತಪ್ಪುತ್ತದೆ.
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.
ಉನ್ನತ ಶಿಕ್ಷಣ ಪಡೆಯಲು ಪ್ರೋತ್ಸಾಹ ದೊರೆಯುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಸಾಮಾನ್ಯವಾಗಿ ಅರ್ಜಿ ಸಲ್ಲಿಸುವ ಹಂತಗಳು:
1. ಅಧಿಕೃತ ಅರ್ಜಿ ಪ್ರಕ್ರಿಯೆ ಆರಂಭವಾದ ನಂತರ ಅರ್ಜಿ ನಮೂನೆ ಭರ್ತಿ ಮಾಡಬೇಕು.
2. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
3. ಬ್ಯಾಂಕ್ ಖಾತೆ ವಿವರಗಳನ್ನು ಸರಿಯಾಗಿ ನಮೂದಿಸಬೇಕು.
4. ಸಲ್ಲಿಸಿದ ಮಾಹಿತಿಯನ್ನು ಪರಿಶೀಲಿಸಿ ಅಂತಿಮವಾಗಿ ಅರ್ಜಿಯನ್ನು ಸಲ್ಲಿಸಬೇಕು.
5. ಅರ್ಜಿ ಪರಿಶೀಲನೆಯ ನಂತರ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಆಯ್ಕೆ ಕೆಳಗಿನ ಅಂಶಗಳನ್ನು ಆಧರಿಸಿರಬಹುದು.
- ಆರ್ಥಿಕ ಪರಿಸ್ಥಿತಿ
- ಶೈಕ್ಷಣಿಕ ಸಾಧನೆ
- ದಾಖಲೆಗಳ ಪರಿಶೀಲನೆ
- ಸಂಸ್ಥೆಯ ನಿಯಮಗಳು ಹಾಗೂ ಅರ್ಹತಾ ಮಾನದಂಡಗಳು
ವಿದ್ಯಾರ್ಥಿಗಳು ಗಮನಿಸಬೇಕಾದ ವಿಷಯಗಳು
ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ.ಬ್ಯಾಂಕ್ ಖಾತೆ ವಿದ್ಯಾರ್ಥಿಯ ಹೆಸರಿನಲ್ಲಿರುವುದು ಉತ್ತಮ.ಮೊಬೈಲ್ ಸಂಖ್ಯೆ ಸಕ್ರಿಯವಾಗಿರಲಿ.ತಪ್ಪು ಮಾಹಿತಿ ನೀಡಬೇಡಿ.ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.
ಶಿಕ್ಷಣಕ್ಕೆ ಆರ್ಥಿಕ ನೆರವಿನ ಮಹತ್ವ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಶಿಕ್ಷಣವೇ ಉತ್ತಮ ಭವಿಷ್ಯಕ್ಕೆ ಅಡಿಪಾಯವಾಗಿದೆ. ಆದರೆ ಆರ್ಥಿಕ ಸಮಸ್ಯೆಗಳ ಕಾರಣದಿಂದ ಅನೇಕ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧದಲ್ಲೇ ಬಿಡುವ ಪರಿಸ್ಥಿತಿ ಎದುರಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿವೇತನ ಯೋಜನೆಗಳು ದೊಡ್ಡ ನೆರವಾಗುತ್ತವೆ. ಶ್ರೀರಾಮ್ ಫೈನಾನ್ಸ್‌ನಂತಹ ಸಂಸ್ಥೆಗಳು ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತಿವೆ.

ವಿದ್ಯಾರ್ಥಿಗಳಿಗೆ ಸಲಹೆ
ಯಾವುದೇ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಅದರ ಅಧಿಕೃತ ನಿಯಮಗಳು, ಅರ್ಹತಾ ಮಾನದಂಡಗಳು ಹಾಗೂ ಕೊನೆಯ ದಿನಾಂಕವನ್ನು ಪರಿಶೀಲಿಸಿ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮಾಹಿತಿಯನ್ನು ಮಾತ್ರ ನಂಬದೆ, ಅಧಿಕೃತ ಪ್ರಕಟಣೆಗಳ ಆಧಾರದ ಮೇಲೆ ಅರ್ಜಿ ಸಲ್ಲಿಸುವುದು ಸುರಕ್ಷಿತ.
ವಿದ್ಯಾರ್ಥಿಗಳ ಜೀವನದಲ್ಲಿ ಒಳ್ಳೆಯ ಅಧ್ಯಾಯವನ್ನು ಪಡೆಯಲು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲಿ