Telegram Join My Telegram   WhatsApp Join My WhatsApp

PM Vishwakarma Scheme: ಪಿಎಂ ವಿಶ್ವಕರ್ಮ ಯೋಜನೆ ಭಾರತದ ಸಾಂಪ್ರದಾಯಿಕ ಕೈಗಾರಿಕೆಗಳಿಗೆ ಹೊಸ ಜೀವ

PM Vishwakarma scheme

ಪಿಎಂ ವಿಶ್ವಕರ್ಮ ಯೋಜನೆ (PM Vishwakarma Scheme) ಎಂಬುದು ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದ್ದು ಸಾಂಪ್ರದಾಯಿಕ ಕೈಗಾರಿಕೆ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಸಮಗ್ರ ಬೆಂಬಲ ಒದಗಿಸುವ ಉದ್ದೇಶದಿಂದ ಆರಂಭಿಸಲಾಗಿದೆ

ಈ ಯೋಜನೆಯನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 2023 ರಲ್ಲಿ ಪ್ರಾರಂಭಿಸಲಾಯಿತು “ವಿಶ್ವಕರ್ಮ ಎಂಬ ಪದವು ಭಾರತದ ಪೌರಾಣಿಕ ಸಂಪ್ರದಾಯದಲ್ಲಿ ಸೃಷ್ಟಿ ಮತ್ತು ನಿರ್ಮಾಣದ ದೇವರನ್ನು ಸೂಚಿಸುತ್ತದೆ ಇದೇ ಅರ್ಥದಲ್ಲಿ ಕೈಗಾರಿಕ ವೃತ್ತಿಜೀವಿಗಳನ್ನು ದೇಶದ ನಿರ್ಮಾಣ ಶಿಲ್ಪಿಗಳೆಂದು ಗುರುತಿಸಿ ಅವರಿಗೆ ಗೌರವ ಮತ್ತು ಬೆಂಬಲ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ

ಈ ಯೋಜನೆಯ ಮುಖ್ಯ ಗುರಿ 

  • ಸಾಂಪ್ರದಾಯಿಕ ಕೈಗಾರಿಕೆಗಳನ್ನು ಪುನರುಜ್ಜೀವನಗೊಳಿಸುವುದು
  • ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದು
  • ಸ್ವಯಂ ಉದ್ಯೋಗವಾಕಾಶಗಳನ್ನು ಹೆಚ್ಚಿಸುವುದು
  • ಸಣ್ಣ ಕೈಗಾರಿಕಾ ವೃತ್ತಿಜೀವಿಗಳಿಗೆ ಹಣಕಾಸು ನೆರವು ನೀಡುವುದು
  • ಡಿಜಿಟಲ್ ಯುಗಕ್ಕೆ ತಕ್ಕಂತೆ ಕೈಗಾರಿಕೆಗಳನ್ನ ಆಧುನಿಕಗೊಳಿಸುವುದು

ಭಾರತೀಯ ಸಾಂಪ್ರದಾಯಕ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವುದು

ಯೋಜನೆಯ ಅಗತ್ಯತೆ

ಭಾರತದಲ್ಲಿ ಸಾಂಪ್ರದಾಯಕ ಕೈಗಾರಿಕೆಗಳಿಗೆ ಶತಮಾನಗಳಿಂದ ಸಮಾಜದ ಅವಿಭಾಜ್ಯ ಅಂಗವಾಗಿದೆ ಆದರೆ ಕೇಳಿದ ಕೆಲವು ದಶಕಗಳಿಂದ ಈ ಕೆಳಗಿನ ಸಮಸ್ಯೆಗಳು ಹೆಚ್ಚಾಗಿದ್ದವು

1.ಹಣಕಾಸಿನ ಕೊರತೆ

ಅನೇಕ ಕೈಗಾರಿಕ ವೃತ್ತಿಜೀವಿಗಳಿಗೆ ಬ್ಯಾಂಕ್ ಸಾಲ ಸಿಗುತ್ತಿರಲಿಲ್ಲ ಅವರು ಹೆಚ್ಚಿನ ಬಡ್ಡಿದರದಲ್ಲಿ ಖಾಸಗಿ ಸಾಲಗಾರರ ಮೇಲೆ ಅವಲಂಬಿತರಾಗುತ್ತಿದ್ದರು

2. ಆಧುನಿಕ ಉಪಕರಣಗಳ ಅಭಾವ

ಹಳೆಯ ಉಪಕರಣಗಳನ್ನು ಬಳಸಿ ಉತ್ಪಾದನೆ ಮಾಡುವುದರಿಂದ ಉತ್ಪನ್ನಗಳ ಗುಟಮಟ್ಟ ಮತ್ತು ಪ್ರಮಾಣ ಕಡಿಮೆಯಾಗುತ್ತಿತ್ತು

3. ಮಾರುಕಟ್ಟೆ ಸಮಸ್ಯೆ

ಗ್ರಾಮೀಣ ಪ್ರದೇಶದ ಕೈಗಾರಿಕ ಉತ್ಪನ್ನಗಳು ದೊಡ್ಡ ಮಾರುಕಟ್ಟೆಗೆ ತಲಪುತ್ತಿರಲಿಲ್ಲ

4. ಯುವಪೀಳಿಗೆಯ ನಿರಾಸಕಿತಿತ್

ಆದಾಯ ಕಡಿಮೆ ಇರುವುದರಿಂದ ಯುವಕರು ಸಾಂಪ್ರದಾಯಿಕ ವೃತ್ತಿಗಳನ್ನು ಮುಂದುವರಿಸಲು ಆಸಕ್ತಿ ತೋರಿಸುತ್ತಿರಲಿಲ್ಲ

5.ತಾಂತ್ರಿಕ ಜ್ಞಾನದ ಕೊರತೆ

ಡಿಜಿಟಲ್ ಪಾವತಿ ಮತ್ತು ಆನ್ಲೈನ್ ಮರೆ ಮತ್ತು ಬ್ರ್ಯಾಂಡಿಂಗ್ ಕುರಿತು ಅರಿವು ಕಡಿಮೆ ಇತ್ತು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ದೃಷ್ಟಿಯಿಂದ ಪಿಎಂ ವಿಶ್ವಕರ್ಮ ಯೋಜನೆ ರೂಪಿಸಲಾಗಿದೆ

ಯೋಜನೆಯ ಪ್ರಮುಖ ಉದ್ದೇಶಗಳು

ಪಿಎಂ ವಿಶ್ವಕರ್ಮ ಯೋಜನೆ ಅನೇಕ ಮಹತ್ವದ ಉದ್ದೇಶಗಳನ್ನು ಹೊಂದಿದೆ

ಸಾಂಪ್ರದಾಯಿಕ ಕೌಶಲ್ಯಗಳ ಸಂರಕ್ಷಣೆ

ಭಾರತೀಯ ಪರಂಪರೆಯ ಭಾಗವಾಗಿರುವ ಕೈಗಾರಿಕಾ ಕೌಶಲ್ಯ ಗಳ ಮಂದಿನ ಪೀಳಿಗೆಗೆ ಉಳಿಸುವುದು

ಆರ್ಥಿಕ ಸಬಲೀಕರಣ

ಸಣ್ಣ ಕೈಗಾರಿಕಾ ವೃತ್ತಿಜೀವಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸಿ ಸ್ವಾವಲಂಬಿಗಳನ್ನಾಗಿಸುವುದು

ಉದ್ಯೋಗ ಸೃಷ್ಟಿ

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಅವಕಾಶಗಳನ್ನು ಹೆಚ್ಚಿಸುವುದು

ಡಿಜಿಟಲ್ ಸಂಪರ್ಕ

ಡಿಜಿಟಲ್ ಪಾವತಿ ಮತ್ತು ಆನ್ಲೈನ್ ವ್ಯವಹಾರಗಳಲ್ಲಿ ಕೈಗಾರಿಕಾ ವೃತ್ತಿಜೀವಿಗಳಿಗೆ ಸೇರಿಸುವುದು

ಉತ್ಪನ್ನ ಗುಣಮಟ್ಟ ಸುಧಾರಣೆ

ಆಧುನಿಕ ತರಬೇತಿ ಮತ್ತು ಉಪಕರಣಗಳು ಮೂಲಕ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸುವುದು

ಜಾಗತಿಕ ಮಾರುಕಟ್ಟೆ ಸಂಪರ್ಕ

ಭಾರತೀಯ ಸಾಂಪ್ರದಾಯಕ ಉತ್ಪನ್ನಗಳಿಗೆ ದೇಶಿಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸುವುದು

ಯೋಜನೆಯಡಿಯಲ್ಲಿ ಒಳಗೊಂಡ ವೃತಿವಳು

ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಹಲವಾರು ಸಾಂಪ್ರದಾಯಿಕ ವೃತ್ತಿಗಳಲ್ಲಿ ಒಳಗೊಂಡಿದೆ ಅವುಗಳಲ್ಲಿ ಕೆಲವು

1. ಕಮ್ಮಾರರು

2. ಬಂಗಾರದ ಕೆಲಸಗಾರರು

3. ಮರದ ಕೆಲಸಗಾರರು

4. ಕುಂಬಾರರು

5. ಶಿಲ್ಪಿಗಳು

6. ಹೊಲಿಗೆಗಾರರು

7. ಕೂದಲು ಕತ್ತರಿಸುವವರು

8. ಧೋಭಿಗಳು

9. ಚರ್ಮದ ಕೆಲಸಗಾರರು

10. ಮೀನುಗಾರಿಕೆ ಜಾಲ ತಯಾರಕರು

11. ಬಾಸ್ಕೆಟ್ ಮತ್ತು ಚೀಲ ತಯಾರಕರು

12. ಆಟಿಕೆ ತಯಾರಕರು

13. ಗಡಿಯಾರ ಸರಿಪಡಿಸುವವರು

14. ಹೂವಿನ ಅಲಂಕಾರಕಾರರು

15. ಕಲ್ಲಿನ ಶಿಲ್ಪಿಗಳು

16. ಕಂಚಿನ ವಸ್ತು ತಯಾರಕರು

17. ಬೀಗ ತಯಾರಕರು

18 ದೋಣಿ ತಯಾರಕರು

ಈ ವೃತ್ತಿಗಳನ್ನು ಕೈಗೊಳ್ಳುತ್ತಿರುವ ಕುಟುಂಬಗಳಿಗೆ ಯೋಜನೆಯ ಪ್ರಯೋಜನಗಳು ನೇರವಾಗಿ ದೊರೆಯುತ್ತವೆ

ಯೋಜನೆಯ ಪ್ರಮುಖ ವೈಶಿಷ್ಟಗಳು

ಯೋಜನೆಗೆ ನೋಂದಾಯಿತ ಫಲಾನುಭವಗಳಿಗೆ ಸರ್ಕಾರದಿಂದ ಅಧಿಕೃತ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ ಇದು ಅವರ ಮಾನ್ಯತೆ ನೀಡುತ್ತದೆ, ಮತ್ತು ಫಲಾನುಭವಿಗಳಿಗೆ ಮೂಲಭೂತ ಮತ್ತು ಉನ್ನತ ಮಟ್ಟದ ತರಬೇತಿಯನ್ನು ಒದಗಿಸಲಾಗುತ್ತದೆ

ತರಬೇತಿ ವಿಷಯಗಳು

  • ಉತ್ಪನ್ನ ಗುಣಮಟ್ಟ ಸುಧಾರಣೆ
  • ಆಧುನಿಕ ಉಪಕರಣ ಬಳಕೆ
  • ಡಿಜಿಟಲ್ ಪಾವತಿ
  • ಆನ್ ಲೈನ್ ಮಾರಾಟ
  • ಪ್ಯಾಕೇಜಿಂಗ್ ಮತ್ತು ಬ್ರ್ಯಾಂಡಿಂಗ್
  • ಗ್ರಾಹಕ ಸೇವೆ

ತರಬೇತಿ ಅವಧಿಯಲ್ಲಿ ಪ್ರತಿದಿನ ಭತ್ಯೆ ನೀಡಲಾಗಿ, ಆಧುನಿಕ ಉಪಕಾರಗಳನ್ನು ಖರೀದಿಸಲು ಸರ್ಕಾರದಿಂದ ಆರ್ಥಿಕ ನೆರವು ಒದಗಿಸಲಾಗುತ್ತದೆ,ಮತ್ತು ಫಲಾನುಭವಿಗಳಿಗೆ ಎರೆಡು ಹಂತಗಳಲ್ಲಿ ಸಾಲ ನೀಡಲಾಗುತ್ತದೆ

ಮೊದಲನೇ ಹಂತ 

  • ₹1 ಲಕ್ಷದವರೆಗೆ ಸಾಲ
  • ಕಡಿಮೆ ಬಡ್ಡಿ
  • ಎರಡನೇ ಹಂತದಲ್ಲಿ
  • ₹2 ಲಕ್ಷದವರೆಗೆ ಹೆಚ್ಚುವರಿ ಸಾಲ
  • ವ್ಯವಹಾರ ವಿಸ್ತರಣೆಗೆ ನೆರವು

ಯೋಜನೆಯ ಪ್ರಯೋಜನಗಳು 

ಆರ್ಥಿಕ ಸ್ಥಿರತೆ: ಸಾಲ ಮತ್ತು ತರಬೇತಿಯ ಮೂಲಕ ಸಣ್ಣ ಕೈಗಾರಿಕಾ ವೃತ್ತಿಜೀವಿಗಳಿಗೆ ಉತ್ತಮ ಆದಾಯ ಗಳಿಸಲು ಸಾಧ್ಯವಾಗುತ್ತದೆ,ಅನೇಕ ಮಹಿಳೆಯರು ಕೈಗಾರಿಕ ವೃತ್ತಿಜೀವಿಗಳಿಲ್ಲಿ ತೊಡಗಿಸಿಕೊಂಡಿದ್ದು ಯೋಜನೆಯಿಂದ ಅವರಿಗೆ ವಿಶೇಷ ಪ್ರಯೋಜನ ಸಿಗುತ್ತದೆ ಮತ್ತು ಸಣ್ಣ ಉದ್ಯಮಗಳ ಬೆಳವಣಿಗೆಯಿಂದ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ, ಸಣ್ಣ ಕೈಗಾರಿಕಾ ವೃತ್ತಿಜೀವಿಗಳು ಡಿಜಿಟಲ್ ಆರ್ಥಿಕತೆಯ ಭಾಗವಾಗುತ್ತಾರೆ

ಯೋಜನೆಗೆ ಅರ್ಹತೆ

ಪಿಎಂ ವಿಶ್ವಕರ್ಮ ಯೋಜನೆಗೆ  ಅರ್ಜಿ ಸಲ್ಲಿಸಲು ಕೆಲವು ಅರ್ಹತೆಗಳಿವೆ

ಪ್ರಮುಖ ಅರ್ಹತೆಗಳು

  • ಭಾರತೀಯ ನಾಗರಿಕರಬೇಕು
  • ಸಾಂಪ್ರದಾಯಿಕ ಕೈಗಾರಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿರಬೇಕು
  • ಸ್ವಯಂ ಉದ್ಯೋಗಿಯಾಗಿರಬೇಕು
  • ಕನಿಷ್ಠ 18 ವರ್ಷ ವಯಸ್ಸಿರಬೇಕು
  • ಕುಟುಂಬದ ಒಬ್ಬ ಸದಸ್ಯ ಮಾತ್ರ ಅರ್ಜಿ ಸಲ್ಲಿಸಬಹುದು

ಅಗತ್ಯ ದಾಖಲೆಗಳು

1 ಆಧಾರ್ ಕಾರ್ಡ್

2 ಮೊಬೈಲ್ ಸಂಖ್ಯೆ

3 ಬ್ಯಾಂಕ್ ಖಾತೆ ವಿವರ

4 ವೃತ್ತಿಗೆ ಸಂಬಂಧಿಸಿದ ಮಾಹಿತಿ

5 ವಿಳಾಸದ ದಾಖಲೆ

6 ರೇಷನ್ ಕಾರ್ಡ್

ಅರ್ಜಿ ಸಲ್ಲಿಸುವ ವಿಧಾನ 

ಪಿಎಂ ವಿಶ್ವಕರ್ಮ ಯೋಜನೆಗೆ ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು

ಆನ್ ಲೈನ್ ವಿಧಾನ 

1. ಅಧಿಕೃತ ವೆಬ್ಸೈಟ್ ಗೆ ಭೇಟಿ ಸಿಡಬೇಕು

2. ಮೊಬೈಲ್ ಸಂಖ್ಯೆಯ ಮೂಲಕ ನೋಂದಣಿ ಮಾಡಬೇಕು

3 ಆಧಾರ್ ಪರಿಶೀಲನೆ ಪೂರ್ಣಗೊಳಿಸಬೇಕು

4. ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು

5. ದಾಖಲೆಗಳನ್ನು ಅಪ್ಲೋಡ್ ಮಾಡಬೇಕು

6. ಅರ್ಜಿಯನ್ನು ಸಲ್ಲಿಸಬೇಕು

ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವಿಧಾನ

ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ ಸೇವಾ ಕೇಂದ್ರಗಳ (CSC) ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ

ಮಹಿಳೆಯರಿಗೆ ಯೋಜನೆಯ ಮಹತ್ವ

ಪಿಎಂ ವಿಶ್ವಕರ್ಮ ಯೋಜನೆ ಮಹಿಳಾ ಸಬಲೀಕಾರಕ್ಕೆ ಮಹತ್ವದ ಹೆಜ್ಜೆಯಾಗಿದೆ,ಹಲವಾರು ಮಹಿಳೆಯರು ಹೊಲಿಗೆ.ಕೈ ಕಲೆ. ಆಹಾರ ಸಂಸ್ಕರಣೆ,ಹೂವಿನ ಹಲಂಕರ ಮುಂತಾದ ಕ್ರೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ

ಮಹಿಳೆಯರಿಗೆ ಮನೆಯಿಂದಲೇ ಉದ್ಯಮ ನಡೆಸಲು ಯೋಜನೆ ನೆರವಾಗುತ್ತಾರೆ

ಸಂತ ಆದಾಯ ಗಳಿಸುವ ಮೂಲಕ  ಮಹಿಳೆಯರು ಕುಟುಂಬದಲ್ಲಿ ಗೌರವ ಮತ್ತು ನಿರ್ಧಾರ ಕೈಗೊಳ್ಳುವ ಶಕ್ತಿಯನ್ನು ಪಡೆಯುತ್ತಾರೆ

ಡಿಜಿಟಲ್ ಭಾರತದತ್ತ ಹೆಜ್ಜೆ 

ಇಂದಿನ ಕಾಲದಲ್ಲಿ ಡಿಜಿಟಲ್ ವ್ಯವಹಾರ ಬಹಳ ಮುಖ್ಯವಾಗಿದೆ

ಆನ್ಲೈನ್ ಮಾರಾಟ : ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಮತ್ತು ಇತರ ಇನ್ಕಮ್ ವೇದಿಕೆಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶ ಸಿಗುತ್ತದೆ ಹಾಗೆ ಸಾಮಾಜಿಕ ಜಾಲತಾಣದ ಮಾರುಕಟ್ಟೆಯಲ್ಲಿ ಅಂದರೆ ಫೇಸ್ಬುಕ್ ಇನ್ಸ್ಟಾಗ್ರಾಂ ವಾಟ್ಸಾಪ್ ಮೂಲಕ ಉತ್ಪನ್ನ ಪ್ರಚಾರ ಮಾಡಲು ತರಬೇತಿ ನೀಡಲಾಗುತ್ತದೆ

ಗ್ರಾಮೀಣ ಆರ್ಥಿಕತೆಯ ಮೇಲೆ ಪರಿಣಾಮ 

ಪಿಎಂ ವಿಶ್ವಕರ್ಮ ಯೋಜನೆ ಗ್ರಾಮೀಣ  ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮಹತ್ವದ ಪತ್ರ ವಹಿಸುತ್ತದೆ, ಗ್ರಾಮ ಮಟ್ಟದಲ್ಲಿ ಉತ್ಪಾದನೆ ಹೆಚ್ಚುವುದರಿಂದ ಸ್ಥಳೀಯ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ,ಗ್ರಾಮಗಳಲ್ಲಿ ಉದ್ಯೋಗ ಸಿಗುವುದರಿಂದ ನಗರಗಳಿಗೆ ವಲಸೆ ಹೋಗುವ ಅವಶ್ಯಕತೆ ಕಡಿಮೆಯಾಗುತ್ತದೆ ಮತ್ತು ಸಣ್ಣ ಮಟ್ಟದ ಕೈಗಾರಿಕೆಗಳು ಬೆಳೆಯುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಆದಾಯ ಹೆಚ್ಚಾಗುತ್ತದೆ

Scheme-     Link click here

Whatsapp- Link click here

Telegram    -Link  click here

MAKE IN INDIA ಅಭಿಯಾನದ ಯಶಸ್ಸಿಗೆ ಸಣ್ಣ ಕೈಗಾರಿಕಾ ಪಾತ್ರ ಮಹತ್ವದ್ದಾಗಿದೆ ಪಿಎಂ ವಿಶ್ವಕರ್ಮ ಯೋಜನೆ ಮೂಲಕಪಿಎಂ ವಿಶ್ವಕರ್ಮ ಯೋಜನೆ ಮತ್ತು MAKE IN INDIA

  • ದೇಶೀಯ ಉತ್ಪಾದನೆ ಹೆಚ್ಚುತ್ತದೆ
  • ಸ್ಥಳೀಯ ಕೌಶಲ್ಯಗಳಿಗೆ ಬೆಂಬಲ ಸಿಗುತ್ತದೆ
  • ಗ್ರಾಮೀಣ ಉತ್ಪನ್ನಗಳು ರಾಷ್ಟ್ರಮಟ್ಟಕ್ಕೆ ತಲುಪುತ್ತದೆ
  • ರಫ್ತು ಅವಕಾಶ ಹೆಚ್ಚಾಗುತ್ತದೆ

 ವಿಶೇಷ ಸೂಚನೆ

ಪಿಎಂ ವಿಶ್ವಕರ್ಮ ಯೋಜನೆ ಭಾರತದ ಸಾಂಪ್ರದಾಯಿಕ ಕೈಗಾರಿಕ ವೃತ್ತಿಜೀವಿಗಳನ್ನು ಹೊಸ ಜೀವ ತುಂಬುತ್ತಿರುವ ಐತಿಹಾಸಿಕ ಯೋಜನೆಯಾಗಿದೆ ಇದು ಕೇವಲ ಸಾಲ ನೀಡುವ ಕಾರ್ಯಕ್ರಮವಲ್ಲ ಸಾಂಪ್ರದಾಯಿಕ ಕೌಶಲ್ಯಗಳಿಗೆ ಗೊರವ ನೀಡುವ ಗ್ರಾಮೀಣ ಆರ್ಥಿಕತೆ ಬಲಪಡಿಸುವುದು ಯುವಜನತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ಆತ್ಮನಿರ್ಭರ ಭಾರತದ ಕನಸನ್ನು ನನಸು ಮಾಡುವ ಮಹತ್ವದ ಹೆಜ್ಜೆಯಾಗಿದೆ

ಈ ಯೋಜನೆಯ ಯಶಸ್ಸಿ ಸರ್ಕಾರದಷ್ಟೇ ಅಲ್ಲ ಸಮಾಜದ ಸಹಕಾರದ ಮೇಲು ಅವಲಂಬಿತವಾಗಿದೆ ಕೈಗಾರಿಕಾ ವೃತ್ತಿಜೀವಿಗಳಿಗೆ ಉತ್ಪನ್ನಗಳನ್ನು ಬೆಂಬಸುವುದು ಸ್ಥಳೀಯ ಉತ್ಪನ್ನ ಖರೀದಿ ಮತ್ತು ಭಾರತೀಯ ಸಂಪ್ರದಾಯ ಕಲೆಗಳನ್ನು ಹೀರೋ ಕಾಲಕ್ಕೆ ಕೊಡುಗೆ ನೀಡಲಿದೆ

 

WhatsApp Group Join Now
Telegram Group Join Now

Leave a Comment