ತುಕಾರಾಮ್ ಮಂಡೆ IAS ಅವರು ಮಹಾರಾಷ್ಟ್ರ ಕೆಡರ್ ನ ಭಾರತೀಯ ನಾಗರಿಕ ಸೇವೆ ಐಎಎಸ್ ಅಧಿಕಾರಿಗಳಲ್ಲಿ ಅತ್ಯಂತ ಜನಪ್ರಿಯ ಹಾಗೂ ಕಟ್ಟು ನಿಟ್ಟಿನ ಅಧಿಕಾರಿಗಳಾಗಿ ಹೆಸರುವಾಸಿಯಾಗಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಮತ್ತು ಜನಸಾಹಿ ತಕ್ಕಾಗಿ ನಿರ್ಭಯವಾಗಿ ಕೆಲಸ ಮಾಡುವ ಶೈಲಿಯಿಂದ ಅವರು ದೇಶಾದ್ಯಂತ ಗಮನಿಸಿದಿದ್ದಾರೆ. ಸಾಮಾನ್ಯ ರೈತ, ಕುಟುಂಬದಿಂದ ಬೆಳೆದು ಕಠಿಣ ಪರಿಶ್ರಮದ ಮೂಲಕ ಯುಪಿಎಸ್ಇ ಪರೀಕ್ಷೆಯಲ್ಲಿ ಅಖಿಲ ಭಾರತ 20ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯ ಜೀವನ ಅನೇಕ ಯುವಕರಿಗೆ ಸ್ಪೂರ್ತಿಯಾಗಿದೆ.
ತುಕಾರಾಮ್ ಮಂಡೆ IAS ಜನನ ಮತ್ತು ಬಾಲ್ಯ
ತುಕಾರಾಮ್ ಮಂಡೆ IAS ಅವರು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಟಾಡ್ಸೊನಾ (Tadsona) ಗ್ರಾಮದಲ್ಲಿ ರೈಲು ಕುಟುಂಬದಲ್ಲಿ ಜನಿಸಿದರು . ತಾಯಿ ಅಸರಬಾಯಿ ಮುಂಡೆ ಕುಟುಂಬವನ್ನು ಕಷ್ಟದ ಪರಿಸ್ಥಿತಿಯಲ್ಲಿ ನಿರ್ವಹಿಸುತ್ತಿದ್ದರು. ಬಾಲ್ಯದಿಂದಲೇ ಅವರು ಖುಷಿ ಕೆಲಸಗಳಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದರು. ಶಾಲೆಗೆ ಹೋಗುವ ಮೊದಲು ಮತ್ತು ನಂತರ ಹೊಲದಲ್ಲಿ ದುಡಿದು ಶಿಕ್ಷಣದ ಮಹತ್ವವನ್ನು ಅರಿತು ಹೋದನು ಮುಂದುವರಿಸಿದರು ಈ ಶ್ರಮ ಮತ್ತು ಶಿಸ್ತು ಅವರ ವ್ಯಕ್ತಿತ್ವವನ್ನು ರೂಪಿಸಿತು

ತುಕಾರಾಮ್ ಮಂಡೆ IAS ಶಿಕ್ಷಣ
ಅವರು ಜಿಲ್ಲಾ ಪಂಚಾಯತಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಉನ್ನತ ಶಿಕ್ಷಣಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. ನಂತರ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿ ಹಲವು ಸವಾಲುಗಳನ್ನು ಎದುರಿಸಿದರು ಪ್ರಯತ್ನ ಬಿಡದೆ 2004ರ ಪರೀಕ್ಷೆಯಲ್ಲಿ ಅಖಿಲ ಭಾರತ 20ನೇ ರ್ಯಾಂಕ್ ಪಡೆದು 2005ರ ಮಹಾರಾಷ್ಟ್ರ ಲೀಡರ್ ಅಧಿಕಾರಿಯಾಗಿ ಆಯ್ಕೆಯಾದರು.
ತುಕಾರಾಮ್ ಮಂಡೆ IAS ಅಧಿಕಾರಿಯಾಗಿ ಸೇವೆ
ಐಎಎಸ್ ಅಧಿಕಾರಿಯ ಆದ ನಂತರ ಅವರು ಮಹಾರಾಷ್ಟ್ರದ ಅನೇಕ ಜಿಲ್ಲೆಗಳು ಮತ್ತು ನಗರಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನಂದೇಡ್, ವಾಷಿಂಗ್ ,ಜಲ್ನಾ, ಸೋಲಾಪುರ, ನಾವಿ ಮುಂಬೈ, ನಾಸಿಕ್, ನಾಗಪುರ, ಪುಣೆ ಸೇರಿದಂತೆ ಹಲವು ಸ್ಥಳಗಳಲ್ಲಿ ಜಿಲ್ಲಾಧಿಕಾರಿ ಮಹಾನಗರ ಪಾಲಿಕೆ ಆಯುಕ್ತ ಸಾರಿಗೆ ಸಂಸ್ಥೆಯ ಮುಖ್ಯಸ್ಥ ಹಾಗೂ ಇತರ ಪ್ರಮುಖ ಆಡಳಿತ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಎಲ್ಲೆಲ್ಲಿ ಸೇವೆ ಸಲ್ಲಿಸಿದರು ನಿಯಮ ಪಾಲನೆ ಪಾರದರ್ಶಕತೆ ಮತ್ತು ಜನರ ಆಡಳಿತಕ್ಕೆ ಆದ್ಯತೆ ನೀಡಿದರು.
ಪ್ರಾಮಾಣಿಕತೆ ಮತ್ತು ಕಟ್ಟುನಿಟ್ಟಿನ ಆಡಳಿತ
ತುಕಾರಾಮ್ ಮುಂಡೆ ಅವರ ಆಡಳಿತ ಶೈಲಿಯ ಪ್ರಮುಖ ಲಕ್ಷಣವೆಂದರೆ ಪ್ರಾಮಾಣಿಕತೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕೆಲಸಾಡಬೇಕು, ಸರ್ಕಾರಿ ಹಣವನ್ನು ದುರುಪಯೋಗ ಮಾಡಬಾರದು ಮತ್ತು ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಬೇಕು ಎಂಬುದನ್ನು ಅವರು ಸದಾ ಒತ್ತಿ ಹೇಳುತ್ತಾರೆ.
ಅವರ ಕಟ್ಟುನಿಟ್ಟಿನ ಕ್ರಮಗಳಿಂದ ಅನೇಕ ಅಕ್ರಮ ಕಟ್ಟಡಗಳ ತೆರವುಗೊಂಡವು , ಭ್ರಷ್ಟಾಚಾರದ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗಿತು ಮತ್ತು ಸರ್ಕಾರಿ ಕಚೇರಿಗಳಲ್ಲಿ ಶಿಸ್ತು ಹೆಚ್ಚಾಯಿತು. ಜನರು ಅವರನ್ನು ” ಸಿಂಗಂ IAS ” ಎಂದು ಕರೆಯಲು ಆರಂಭಿಸಿದರು.
ಜನಪರ ಅಧಿಕಾರಿಯಾಗಿ ಹೆಸರು
ಅವರು ಸಾಮಾನ್ಯ ಜನರ ಅಹವಾಲುಗಳನ್ನು ನೇರವಾಗಿ ಆರಿಸಿ ತ್ವರಿತ ಕ್ರಮ ಕೈಗೊಳ್ಳುವ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಕಚೇರಿಗಳಲ್ಲಿ ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸುವುದು ದೂರುಗಳನ್ನು ಸ್ವೀಕರಿಸಿ ಪರಿಹಾರ ನೀಡುವುದು ಮತ್ತು ಅಧಿಕಾರಿಗಳ ಕಾರ್ಯಕ್ಷಮಯತೆಯನ್ನು ಪರಿಶೀಲಿಸುವುದು ಅವರ ಆಡಳಿತ ಪ್ರಮುಖ ಲಕ್ಷಣಗಳಾಗಿವೆ.
ಕೋವಿಡ್ – 19 ಅವಧಿಯ ಸೇವೆ
ನಾಗಪುರ ಮಹಾನಗರ ಪಾಲಿಗೆ ಆಯುಕ್ತರಾಗಿದ್ದ ಸಂದರ್ಭದಲ್ಲಿ ಹೂವಿಡ್ 19 ಸಾಂಕ್ರಮಿಕ ಸಮಯದಲ್ಲಿ ಸೋಂಕು ನಿಯಂತ್ರಣ, ಆರೋಗ್ಯ ಸೇವೆಗಳ ಸುಧಾರಣೆ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಕಾರಣ ಕೆಲವರಿಂದ ಟೀಕೆಗಳು ಬಂದವು ಆದರೆ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅವರ ಕ್ರಮಗಳನ್ನು ಅನೇಕರು ಬೆಂಬಲಿಸಿದರು.
ಆಹಾರ ಮತ್ತು ಔಷಧ ಆಡಳಿತ (FDA)
ಇತ್ತೀಚಿನ ಅವಧಿಯಲ್ಲಿ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಆಹಾರ ಕಲಬೆರಿಕೆ, ನಕಲಿ ಹಾಲು, ಗುಟ್ಕಾ, ಅಸ್ವಚ್ಚ ಆಹಾರ ಉತ್ಪಾದನೆ ಮತ್ತು ಆಹಾರ ಸುರಕ್ಷತಾ ನಿಯಮ ಉಲ್ಲಂಘನೆಗಳ ವಿರುದ್ಧ ರಾಜ್ಯ ವ್ಯಾಪ್ತಿ ಕಾರ್ಯಾಚರಣೆ ನಡೆಸಿ ಗಮನ ಸೆಳೆದಿದ್ದಾರೆ. ಈ ಕ್ರಮಗಳಿಂದ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಹೆಚ್ಚಿನ ಓತ್ತು ನೀಡಲಾಗಿದೆ.
ತುಕಾರಾಮ್ ಮಂಡೆ IAS ವ್ಯಕ್ತಿತ್ವದ ವಿಶೇಷತೆಗಳು
• ಪ್ರಾಮಾಣಿಕ ಮತ್ತು ನಿರ್ಭಯ ಅಧಿಕಾರಿ
• ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ
• ಜನಸೇವೆಯನ್ನು ಅಧಿಕಾರಿ ಕಿಂತ ದೊಡ್ಡ ಜವಾಬ್ದಾರಿಯನ್ನಾಗಿ ನೋಡುವ ಮನೋಭಾವ
• ಸರಳ ಜೀವನ ಮತ್ತು ಕಠಿಣ ಪರಿಶ್ರಮ
ಯುವಕರಿಗೆ ಸ್ಪೂರ್ತಿ
ತುಕಾರಾಮ್ ಮುಂಡೆ ಅವರು ಅನೇಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಮತ್ತು ಯುಪಿಎಸ್ಸಿ ಅಭ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಯಶಸ್ಸಿಗೆ ನಿರಂತರ ಪರಿಶ್ರಮ, ಆತ್ಮವಿಶ್ವಾಸ ಮತ್ತು ವೈಫಲ್ಯಗಳಿಂದ ಪಾಠ ಕಲಿಯುವ ಮನೋಭಾವ ಅಗತ್ಯವೆಂದೆ ಹೇಳುತ್ತಾರೆ. ಅವರ ಜೀವನವೇ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳಿಗೂ ದೊಡ್ಡ ಕನಸು ಕಾಣಲು ಪ್ರೇರಣೆ ನೀಡುತ್ತದೆ.
ಟೀಕೆಗಳು ಮತ್ತು ವಿವಾದಗಳು
ಅವರ ಕಟ್ಟು ನಿಟ್ಟಿನ ಆಡಳಿತ ಶೈಲಿಗೆ ಮೆಚ್ಚುಗೆ ಸಿಕ್ಕಂತೆಯೇ ಟೀಕೆಗಳು ಬಂದಿವೆ. ಕೆಲವು ರಾಜಕಾರಣಿಯ ನಾಯಕರು ಮತ್ತು ಆಡಳಿತ ವಲಯದವರು ಅವರ ಶೈಲಿ ಅತಿಯಾಗಿ ಕಠಿಣವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅದಾಗ್ಯೂ ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ನಿಯಮ ಪಾಲನೆಗೆ ಅವರು ನೀಡಿದ ಮಹತ್ವದಿಂದ ಜನರಲ್ಲಿ ಅವರ ಗೌರವ ಉಳಿದಿದೆ.
ತುಕಾರಾಮ್ ಮಂಡೆ IAS ಅವರು ಭಾರತದಲ್ಲಿನ ಅತ್ಯಂತ ಪ್ರಾಮಾಣಿಕ ಮತ್ತು ಜನಪರ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು. ಬಡ ರೈತ ಕುಟುಂಬದಿಂದ ದೇಶದ ಪ್ರಮುಖ ಆಡಳಿತ ಕಾರ್ಯಾಗುವವರಿಗೆ ಅವರ ಜೀವನವು ಪರಿಶ್ರಮ, ಶಿಸ್ತು, ಪ್ರಾಮಾಣಿಕತೆ ಮತ್ತು ಜನಸೇವೆಯ ಉದಾಹರಣೆಯಾಗಿದೆ. ಅನೇಕ ವರ್ಗಾವಣೆಗಳು, ಒತ್ತಡಗಳು ಮತ್ತು ಸವಾಲುಗಳ ನಡುವೆಯೂ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿರುವ ಅವರು ಯುವಕರಿಗೆ ಆದರ್ಶ ವ್ಯಕ್ತಿಯಾಗಿದ್ದಾರೆ. ಅವರ ಜೀವನ ಸಂದೇಶ ಸ್ಪಷ್ಟವಾಗಿದ
ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ಜನಸೇವೆಯ ಮನೋಭಾವ ಇದ್ದರೆ ಯಾವುದೇ ಗುರಿಯನ್ನು ಸಾಧಿಸಬಹುದು.
ತುಕಾರಾಮ್ ಮಂಡೆ IAS ಅವರು ಯುವಕರಿಗೆ ಪ್ರೇರಣೆ
UPSC ಪರೀಕ್ಷೆಗೆ ತಯಾರಿ ನಡೆಸುವ ಸಾವಿರಾರು ವಿದ್ಯಾರ್ಥಿಗಳಿಗೆ ತುಕಾರಾಮ್ ಮoಡೆ ಅವರು ಪ್ರೇರಣೆಯಾಗಿದ್ದಾರೆ ಯಶಸ್ಸು ಸಾಧಿಸಲು ಪ್ರಾಮಾಣಿಕ ಪರಿಶ್ರಮ, ಶಿಸ್ತು ಮತ್ತು ಸಮಾಜದ ಬಗ್ಗೆ ಕಾಳಜಿ ಅಗತ್ಯ ಎಂಬುದನ್ನು ಅವರ ಜೀವನವೇ ತಿಳಿಸುತ್ತದೆ
ತುಕಾರಾಮ್ ಮಂಡೆ IAS ನಾಯಕತ್ವದ ಗುಣಗಳು7
ಆವರ ನಾಯಕತ್ವದ ಪ್ರಮುಖ ಅಂಶಗಳು:
- ಜನರೊಂದಿಗೆ ನೇರ ಸಂವಹನ
- ತ್ವರಿತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ
- ಪಾರದರ್ಶಕತೆ ಆಡಳಿತ
- ಸಮಸ್ಯೆ,ಪರಿಹಾರಕ್ಕೆ ಆದ್ಯತೆ
- ತಂಡದೊಂದಿಗೆ ಸಮನ್ವಯ
- ಕಾನೂನಿನ ಪ್ರಕಾರ ನಿರ್ಧಾರ
ಸಮಾಜಕ್ಕೆ ನೀಡಿದ ಸಂದೇಶ!
ಒಬ್ಬ ಸರ್ಕಾರಿ ಅಧಿಕಾರಿಯಾಗಿ ಕೆಲಸ ಕೇವಲ ಕಚೇರಿಯಲ್ಲಿ ಕುಳಿತು ಆದೇಶ ನೀಡುವುದಲ್ಲ, ಜನರ ಸಮಸ್ಯೆಗಳನ್ನ ಅರ್ಥಮಾಡಿಕೊಂಡು ಅವುಗಳಿಗೆ ಪರಿಹಾರ ನೀಡುವುದೇ ನಿಜವಾದ ಆಡಳಿತ ಎಂಬುದನ್ನು ತುಕಾರಾಮ್ ಮoಡೆ ಅವರು ತಮ್ಮ ಕಾರ್ಯದ ಮೂಲಕ ಸಾಬೀತುಪಡಿಸಿದ್ದಾರೆ