Telegram Join My Telegram   WhatsApp Join My WhatsApp

College students:ಕಾಲೇಜು ವಿದ್ಯಾರ್ಥಿಗಳಲ್ಲಿ HIV ಜಾಗೃತಿ ಮತ್ತು ತಪಾಸಣೆ ಅತ್ಯಂತ ಅವಶ್ಯಕವಾಗಿದೆ

College students :ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಈ ಸೋಂಕು ಹೆಚ್ಚಾಗುತ್ತಿರುವ ಕಾರಣ, ಕರ್ನಾಟಕ ಸರ್ಕಾರ ಮತ್ತು karnataka state AIDS Prevention society (KSAPS) ರಾಜ್ಯದ ಎಲ್ಲಾ ಪದವಿ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿಶೇಷ ಜಾಗೃತಿ ಮತ್ತು ಸ್ವಯಂ ಪ್ರೇರಿತ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತಿದೆ. ಈ ಕುರಿತಾದ ಸಂಪೂರ್ಣ ವಿವರವಾದ ಲೇಖನ ಇಲ್ಲಿದೆ

ಪೀಠಿಕೆ ಮತ್ತು ಇತ್ತೀಚಿನ ಹಿನ್ನೆಲೆ! College students 

ಕಾಲೇಜು ವಿದ್ಯಾರ್ಥಿಗಳಲ್ಲಿ HIV ಜಾಗೃತಿ 

ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (NACO) ವರದಿಯ ಪ್ರಕಾರ, ಎಚ್ಐವಿ ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಪ್ರಸ್ತುತ ರಾಜ್ಯದಲ್ಲಿ ಸುಮಾರು 2.60 ಲಕ್ಷಕ್ಕೂ ಹೆಚ್ಚು ಸೋಂಕಿತರಿದ್ದು , ಇದರಲ್ಲಿ ಸುಮಾರು 54,000 ಜನರಿಗೆ ತಮಗೆ ಸೋಂಕು ಇರುವುದೇ ತಿಳಿದಿಲ್ಲ. ಅತ್ಯಂತ ಕಳವಳಕಾರಿ ಸಂಗಾತಿ ಎಂದರೆ ಅತ್ಯಂತ ಕಳವಳಕಾರಿ ಸಂಗತಿಯೆಂದರೆ 18 ರಿಂದ 35 ವರ್ಷದ ಯುವಜನರಲ್ಲಿ ಈ ಸೋಂಕು ವೇಗವಾಗಿ ಹರಡುತ್ತಿದೆ. ಈ ವಾಯೋಮನದ ಸೋಂಕಿದರ ಸಂಖ್ಯೆ ಕಳೆದ ಎರಡು ವರ್ಷದಲ್ಲಿ 44,500 ರಿಂದ 66,600 ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ  ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ವಿಶೇಷ ಆರೋಗ್ಯ ಅಭಿಯಾನಗಳನ್ನು  ಹಮ್ಮಿಕೊಳ್ಳಲಾಗುತ್ತಿದೆ.

ತಪಾಸಣೆ ಕಡ್ಡಾಯವೇ (ಗೊಂದಲ ಮತ್ತು ವಾಸ್ತವ)

ಸಾಮಾಜಿಕ ಜಾಲತಾಣಗಳಲ್ಲಿ “ಕಾಲೇಜು ವಿದ್ಯಾರ್ಥಿಗಳಿಗೆ ಎಚ್ಐವಿ ಪರೀಕ್ಷೆ ಕಡ್ಡಾಯ” 8 ತಪ್ಪು ಸುದ್ದಿಗಳು ಹರಡಿದ್ದವು. ಆದರೆ KSAPS ಮತ್ತು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದ್ದು, ಯಾವುದೇ ವಿದ್ಯಾರ್ಥಿಗೂ ಎಚ್ಐವಿ ಪರೀಕ್ಷೆ ಕಡ್ಡಾಯವಲ್ಲ ಎಂದು ತಿಳಿಸಿದೆ

ಕಾನೂನು ಚೌಕಟ್ಟು : ಎಚ್ಐವಿ/ಏಡ್ಸ್ (ಪ್ರತಿಬಂಧಕ ಮತ್ತು ನಿಯಂತ್ರಣ) ಕಾಯ್ದೆ 2017ರ ಪ್ರಕಾರ, ವ್ಯಕ್ತಿಯ ಲಿಖಿತ ಒಪ್ಪಿಗೆ ಹಾಗೂ ಕೌನ್ಸೇಲಿಂಗ್ ಇಲ್ಲದೆ  ಬಲವಂತವಾಗಿ ಪರೀಕ್ಷೆ ಮಾಡುವಂತಿಲ್ಲ.

ಸ್ವಯಂ ಪ್ರೇರಿತ ಶಿಬಿರಗಳು: ಕಾಲೇಜುಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುವುದು ಆಡಳಿತ ಮಂಡಳಿಗಳಿಗೆ ಕಡ್ಡಾಯವಾಗಿದೆಯೇ ಹೊರೆತು ಅದರಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ವಿದ್ಯಾರ್ಥಿಗಳ ವೈಯಕ್ತಿಕ ಇಚ್ಛೆಗೆ ಬಿಟ್ಟಿದ್ದಾಗಿದೆ.

ಗೌಪ್ಯತೆ ಮತ್ತು ಡಿಜಿಟಲ್ ತಂತ್ರಜ್ಞಾನ!

ವಿದ್ಯಾರ್ಥಿಗಳು ಸಮಾಜ ಅಥವಾ ಸಹಪಾಠಿಗಳ  ಮಜುಗರಕ್ಕೆ ಒಳಗಾಗದಂತೆ ತಡೆಯಲು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

1. QR ಕೋಡ್ ವ್ಯವಸ್ಥೆ : ಕಾಲೇಜುಗಳಲ್ಲಿ ಕರಪತ್ರ ಮತ್ತು ಬೋರ್ಡ್ ಗಳ ಮೂಲಕ QR ಕೋಡ್ ಪ್ರದರ್ಶಿಸಲಾಗುತ್ತದೆ. ಇದನ್ನು ಸ್ಕ್ಯಾನ್ ಮಾಡಿ ವಿದ್ಯಾರ್ಥಿಗಳು ‘ಸ್ವಯಂ ಅಪಾಯಾನ ಮೌಲ್ಯಮಾಪನ’ ( self – Risk Assessment) ಮಾಡಿಕೊಳ್ಳಬಹುದು.

2. ಮಾಹಿತಿ ಸುರಕ್ಷಣೆ: ಪರೀಕ್ಷೆಗೆ ಒಳಗಾಗುವ ವಿದ್ಯಾರ್ಥಿಗಳ ಹೆಸರು ಅಥವಾ ಗುರುತನ್ನು ಯಾರಿಗೂ ಬಹಿರಂಗ ಪಡಿಸುವುದಿಲ್ಲ. ಕೌನ್ಸೆ ಲಿಂಗ್ ಪ್ರಕ್ರಿಯೆಯು ಸಂಪೂರ್ಣವಾಗಿ  ರಹಸ್ಯವಾಗಿರುತ್ತದೆ.

8 ತಿಂಗಳ ಮೊವಿಲೈಸೆಷನ್ ಪರ್ ಏಡ್ಸ್ ಸುರಕ್ಷಾ (MAS) ಅಭಿಯಾನ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಮತ್ತು ಕಾಲೇಜು ಶಿಕ್ಷಣ ಇಲಾಖೆಯು ಈ ವಿಶೇಷ ಅಭಿಯಾನವನ್ನು ನಡೆಸುತ್ತಿದೆ. ಈ ಯೋಜನೆಯು ಹಂತ ಹಂತವಾಗಿ ಜಾರಿಗೆ ಬರುತ್ತದೆ.

ಮೊದಲ ಎರಡು ತಿಂಗಳು:

ಕ್ಯಾಂಪಸ್ ಗಳಲ್ಲಿ  ಒರಿಯಂಟೆಶನ್ ಹಾಗೂ ಜಾಗೃತಿ ಮೂಡಿಸುವುದು. ಬೀದಿ ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಫ್ಲ್ಯಾಶ್  ಮಾಬ್ ಗಳ ಮೂಲಕ ಯುವಕರಿಗೆ ಏಡ್ಸ್ ಹರಡುವ ವಿಧಾನಗಳ ಬಗ್ಗೆ ಶಿಕ್ಷಣ ನೀಡಲಾಗುತ್ತದೆ.

•6 ನೇ ತಿಂಗಳು: ವೈದ್ಯರು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರೊಂದಿಗೆ ಸಂವಾದ ನಡೆಸಿ ವಿದ್ಯಾರ್ಥಿಗಳ ಅನುಮಾನಗಳನ್ನು ಪರಿಹರಿಸಲಾಗುತ್ತದೆ.

ಉಚಿತ ತಪಾಸಣೆ!

ಇಂಟಿಗ್ರೇಟೆಡ್ ಹೆಲ್ತ್ ಕ್ಯಾಂಪ್ಸ್ (IHC) ಮೂಲಕ ಎಚ್ಐವಿ  ಜೊತೆಗೆ ಹೆಪಟೈಟಿಸ್ ಬಿ ಮತ್ತು ಸಿಫಿಲಿಸ್ ರೋಗಗಳ B ಉಚಿತ ತಪಾಸಣೆಯನ್ನು ಮಾಡಲಾಗುತ್ತದೆ.

ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಏಕೆ ಮುಖ್ಯ?

ಕಾಲೇಜು ವಯಸ್ಸು ಎನ್ನುವುದು ಯುವಜನರು ಹೊಸ  ಸ್ವಾತಂತ್ರ್ಯವನ್ನು ಅನುಭವಿಸುವ ಮತ್ತು ತಪ್ಪು ದಾರಿಗೆ ಕೌಟುಕ ದಿಂದ ಹೆಜ್ಜೆ ಇಡುವ ಸಾಧ್ಯತೆ ಇರುವ ಸಮಯವಾಗಿರುತ್ತದೆ.

• ಸುರಕ್ಷಿತವಲ್ಲದ ಸಂಬಂಧಗಳು: ಸರಿಯಾದ ಲೈಂಗಿಕ ಶಿಕ್ಷಣ ಕೊರತೆಯಿಂದಾಗಿ ಯುವಕರು ಅಪಾಯಕಾರಿ ನಡುವಳಿಕೆಗಳಿಗೆ ಒಳಗಾಗಬಹುದು.

• ಮಾದಕ ದ್ರವ್ಯ ಮತ್ತು ಸೂಜಿಗಳು: ಇಂಜೆಕ್ಷನ್ ಮೂಲಕ ಡ್ರಗ್ಸ್ ತೆಗೆದುಕೊಳ್ಳುವಾಗ ಸೂಜಿಗಳನ್ನು ಹಂಚಿಕೊಳ್ಳುವುದರಿಂದ ಸೋಂಕು ವೇಗವಾಗಿ ಹರಡುತ್ತದೆ.

ಆರಂಭಿಕ ಪತ್ತೆ ಹಚ್ಚುವಿಕೆ: ಎಚ್ಐವಿ ಗುಣಪಡಿಸಲು ಸಾಧ್ಯವಾಗದಿದ್ದರೂ,  ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ  ಆಂಟಿ ರೆಟ್ರೋ ವೈರಲ್ ಥೆರಪಿ (ART) ಕಿಚ್ಚೆಯ ಮೂಲಕ ಸಾಮಾನ್ಯ ಜನರಂತೆ ದೀರ್ಘಕಾಲ  ಆರೋಗ್ಯವಾಗಿ ಬದುಕಬಹುದು.

ತೀರ್ಮಾನ?

ಕಾಲೇಜು ವಿದ್ಯಾರ್ಥಿಗಳಲ್ಲಿ ಎಚ್ಐವಿ ತಪಾಸಣೆಯು ಕೇವಲ ಒಂದು ವೈದ್ಯಕೀಯ ಪರೀಕ್ಷೆಯಲ್ಲ, ಅದು ಅವರ ಭವಿಷ್ಯದ ಸುರಕ್ಷತೆಯ ಹಾದಿಯಾಗಿದೆ. ಸಾಮಾಜಿಕ ಜಾಗೃತಿ ಹೆಚ್ಚಾದಾಗ ಮತ್ತು ಕಾಯಿಲೆಯ ಸುತ್ತಲಿರುವ ಕೌಟುಂಬಿಕ ಹಾಗೂ ಸಾಮಾಜಿಕ ಮುಜುಗರ (Stigma)  ದೂರವಾಗಲು ಸಾಧ್ಯ. ವಿದ್ಯಾರ್ಥಿಗಳು ಯಾವುದೇ ತಪ್ಪು ವಂದತಿಗಳಿಗೆ ಕಿವಿಕೊಡದೆ,  ಸ್ವಯಂ ಜಾಗೃತಿಯಿಂದ ಇಂತಹ ಆರೋಗ್ಯ ಶಿಬಿರಗಳ ಪ್ರಯೋಜನ ಪಡೆಯಬೇಕು

ತಪಾಸಣೆಯ ಪ್ರಯೋಜನಗಳು!

  • ಸೋಂಕನ್ನು ಬೇಗ ಪತ್ತೆಹಚ್ಚುವುದು
  • ಸಮಯಕ್ಕೆ ಚಿಕಿತ್ಸೆ ಆರಂಭಿಸುವುದು
  • ಇತರರಿಗೆ ಸೋಂಕು ಹರಡುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು
  • ಆರೋಗ್ಯಕರ ಜೀವನ ನಡೆಸಬಹುದು
  • ಮಾನಸಿಕ ನೆಮ್ಮದಿ ದೊರೆಯುತ್ತದೆ

ವಿದ್ಯಾರ್ಥಿಗಳ ಪಾತ್ರ?

ಕಾಲೇಜು ವಿದ್ಯಾರ್ಥಿಗಳು ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ

  • ಸ್ನೇಹಿತರಿಗೆ ಸರಿಯಾದ ಸಮಯಕ್ಕೆ ಮಾಹಿತಿ ನೀಡಬಹುದು
  • ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು
  • ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಬಹುದು
  • ಅಪಪ್ರಚಾರಗಳನ್ನ ತಡೆಯಬಹುದು
  • ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸಬಹುದು

ನಮ್ಮ ಸಲಹೆ!

HIV ಕುರಿತು ಭಯಕ್ಕಿಂತ ಜಾಗೃತಿ ಮುಖ್ಯ ಸರಿಯಾದ ಮಾಹಿತಿ ಸಮಯಕ್ಕೆ ತಪಾಸಣೆ ಮತ್ತು ಅಗತ್ಯ ವಿದ್ದಾರೆ ಚಿಕಿತ್ಸೆ ಪಡೆಯುವುದರಿಂದ HIV ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಕಾಲೇಜು ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಜಾಗೃತರಾಗುವುದರ ಜೊತೆಗೆ ಸಮಾಜದಲ್ಲಿಯೂ ಸರಿಯಾದ ಅರಿವು ಮೂಡಿಸುವ ಜವಾಬ್ದಾರಿಯನ್ನು ಹೊರಬೇಕು

ಜಾಗೃತಿ ಜೀವ ಉಳಿಸುತ್ತದೆ – ತಪಾಸಣೆ ಆತ್ಮವಿಶ್ವಾಸ ನೀಡುತ್ತದೆ

HIV Awareness

ಆರೋಗ್ಯಕರ ಯುವಜನತೆ ,ಆರೋಗ್ಯಕರ ಸಮಾಜ ಮತ್ತು ಆರೋಗ್ಯಕ ಭಾರತ ನಿರ್ಮಾಣಕ್ಕೆ HIV ಕುರಿತು ಅರಿವು ಪ್ರತಿಯೊಬ್ಬ ವಿಧ್ಯಾರ್ಥಿಯಲ್ಲೂ ಮೂಡಬೇಕು

 

WhatsApp Group Join Now
Telegram Group Join Now

Leave a Comment